ಉಡುಪಿ:ಅಜ್ಜರಕಾಡು ಪಾರ್ಕ್ನಲ್ಲಿ ನಡೆಯುತ್ತಿರುವ ಫುಡ್ ಕಾರ್ನಿವಲ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು,ಇಂದು ಕೊನೆಯ ದಿನವಾಗಿದೆ.
ವಿವಿಧ ಫುಡ್ ಟ್ರಕ್ಗಳು, ವಿಶಿಷ್ಟ ಭೋಜನ ಪದಾರ್ಥಗಳು ಮತ್ತು ಮನರಂಜನಾ ಕಾರ್ಯಕ್ರಮಗಳೊಂದಿಗೆ ಆಯೋಜನೆ ವಿಶೇಷ ಆಕರ್ಷಣೆಯಾಗಿದ್ದು, ಇಂದು ರಾತ್ರಿ 10 ಗಂಟೆವರೆಗೆ ಸಂದರ್ಶಿಸಲು ಅವಕಾಶ ಇದೆ.
ಉಡುಪಿ ಪವರ್ (Platform of Women Entrepreneurs) ಸಂಘಟನೆ ಈ ಕಾರ್ನಿವಲ್ನ್ನು ಆಯೋಜಿಸಿದ್ದು, ಕುಟುಂಬ ಸಮೇತ ಭೇಟಿ ನೀಡುತ್ತಿರುವವರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.















