ವಾಷಿಂಗ್ಟನ್: ಇತ್ತೀಚೆಗೆ ಎಚ್ 1ಬಿ ವೀಸಾ ಅರ್ಜಿಯ ನವೀಕರಣದಲ್ಲಿ ವಿಳಂಬವಾಗುತ್ತಿದ್ದು, ಭಾರತೀಯರು ನೌಕರರು ಅಮೆರಿಕಕ್ಕೆ ತರೆಳದೇ ಅತಂತ್ರದಲ್ಲಿ ಸ್ಥಿತಿಯಲ್ಲಿದ್ದಾರೆ.
ಈ ನಡುವೆ ವೀಸಾ ನವೀಕರಣವಾಗದ ತನ್ನ ನೌಕರರಿಗೆ ಭಾರತದಿಂದಲೇ ಕೆಲಸ ಮಾಡಲು ಅಮೆಜಾನ್ ತಾತ್ಕಾಲಿಕವಾಗಿ ಅವಕಾಶ ನೀಡಿದೆ.ಮಾ.2ರ ವರೆಗೆ ಭಾರತದಲ್ಲಿ ಇದ್ದುಕೊಂಡು ಕೆಲಸ ಮಾಡಲು ಸೂಚನೆ ನೀಡಿ ಆದೇಶ ಹೊರಡಿಸಿದೆ. ಕೋಡಿಂಗ್ ಮಾಡಲು, ಕಾರ್ಯತಂತ್ರಗಳನ್ನು ರೂಪಿಸಲು ಹಾಗೂ ಗ್ರಾಹಕರೊಂದಿಗೆ ಸಂವಹನ ನಡೆಸುವುದನ್ನು ಒಪ್ಪಂದ ಮಾಡಿಕೊಳ್ಳುವುದನ್ನು ಕಂಪನಿ ನಿರ್ಬಂಧಿಸಿದೆ. ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುವ ಕ್ರಮದಡಿ, ಡಿಸೆಂಬರ್ ತಿಂಗಳಲ್ಲಿ ನಿಗದಿಯಾ ಗಿದ್ದ ಭಾರತೀಯರ ವೀಸಾ ಅರ್ಜಿ ಸಂದರ್ಶನವನ್ನು ಮಾರ್ಚ್ ತಿಂಗಳಿಗೆ ಮುಂದೂಡಿಕೆ ಮಾಡಲಾಗಿತ್ತು.

















