ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಿರಿಯಡ್ಕ ಕೆಪಿಎಸ್ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಉಡುಪಿ: ಭಾರತವು ಯುವ ಸಮುದಾಯದ ದೇಶವಾಗಿದ್ದು ಅವರನ್ನೇ ಗುರಿಯಾಗಿಸಿಕೊಂಡು ಹಾಗೂ ಅವರ ಭವಿಷ್ಯ ಹಾಳು ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಮಾಫಿಯಾಗಳು ತೊಡಗಿಕೊಂಡಿವೆ. ಪ್ರಮುಖವಾಗಿ ದೇಶದ ವಿದ್ಯಾರ್ಥಿಗಳನ್ನು ಮಾದಕ ವ್ಯಸನಗಳ ದಾಸರನ್ನಾಗಿಸಿ, ಅದರಿಂದ ಲಭಿಸುವ ಹಣವನ್ನು ಭಯೋತ್ಪಾದನೆಯಂತಹ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದು ಬೆಂಗಳೂರಿನ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕರಾದ ಸಂದೇಶ್ ಆತಂಕ ವ್ಯಕ್ತಪಡಿಸಿದರು. ಉಡುಪಿಯ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ತಾಲೂಕು, ಪರಿವರ್ತನಾ ಚಾರಿಟೇಬಲ್ […]

ಉಡುಪಿ: ಜ. 5ರಿಂದ 11 ರವರೆಗೆ “ಕೆಮ್ತೂರು ತುಳುನಾಟಕ ಸ್ಪರ್ಧೆ”

ಉಡುಪಿ: ತುಳುಕೂಟ ಉಡುಪಿ ವತಿಯಿಂದ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆ ಇದೇ ಜ. 5ರಿಂದ 11 ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ 7 ಪ್ರಸಿದ್ಧ ತಂಡಗಳಿಗೆ ಅವಕಾಶ ನೀಡಲಾಗಿದೆ ಎಂದರು. ಜ. 5ರಂದು ಸಂಜೆ 5 […]

ಉಡುಪಿಯಲ್ಲಿ ನಿ. ಬೀ. ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವ ಉದ್ಘಾಟನೆ.

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆ ಕಳೆದ 60 ವರ್ಷಗಳಿಂದ ನಿರಂತರ ರಂಗ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಬೆಳವಣಿಗೆಗೆ ದಿ.ಅಣ್ಣಾಜಿ ಬಲ್ಲಾಳರಂತಹ ಸಹೃದಯರ ಪ್ರೋತ್ಸಾಹವಿದೆ. ರಂಗಭೂಮಿ ಬೆಳವಣಿಗೆಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಬುಧವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರಂಗಭೂಮಿ ಉಡುಪಿ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ದಿ. […]

ಜ.3ರಂದು ವಿದುಷಿ ದೀಕ್ಷಾ ರಾಮಕೃಷ್ಣರಿಂದ ‘ಏಕವ್ಯಕ್ತಿ ಗಾನ ನೃತ್ಯಾರ್ಪಣೆ’

ಉಡುಪಿ: ಉಡುಪಿ-ಮಣಿಪಾಲದ ಹೆಜ್ಜೆ-ಗೆಜ್ಜೆ ಫೌಂಡೇಷನ್‌ನ ಸಹ ನಿರ್ದೇಶಕಿಯಾಗಿರುವ ವಿದುಷಿ ದೀಕ್ಷಾ ರಾಮಕೃಷ್ಣ ಇವರಿಂದ ಇದೇ ಜ.3ರ ಶನಿವಾರದಂದು ಶ್ರೀಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ-ನೃತ್ಯಾರ್ಪಣೆ ಕಾರ್ಯಕ್ರಮ ಆರು ಗಂಟೆಗಳ ಕಾಲ ನಡೆಯಲಿದೆ. ಈ ಪ್ರಯತ್ನದ ಮೂಲಕ ದೀಕ್ಷಾ ರಾಮಕೃಷ್ಣ ಅವರು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್‌ನಲ್ಲಿ ಸೇರ್ಪಡೆಗೊಳ್ಳಲು ಪ್ರಯತ್ನಿಸಲಿದ್ದಾರೆ ಎಂದು ಹೆಜ್ಜೆ-ಗೆಜ್ಜೆಯ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ […]

ಉಡುಪಿ: ರಿವರ್ಸ್ ತೆಗೆಯುವ ವೇಳೆ ಒಮ್ಮೇಲೆ ಹಿಮ್ಮುಖವಾಗಿ ಚಲಿಸಿದ ಕಾರು

ಉಡುಪಿ: ರಿವರ್ಸ್ ತೆಗೆಯುವ ವೇಳೆ ಚಾಲಕ ನಿಯಂತ್ರಣದ ತಪ್ಪಿದ ಕಾರೊಂದು ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಉಡುಪಿ ಜಾಮೀಯಾ ಮಸೀದಿ ಸಮೀಪದ ಐರೋಡಿ ಬಿಲ್ಡಿಂಗ್ ಬಳಿ ಸಂಭವಿಸಿದೆ. ನಗರದ ಐರೋಡಿ ಬಿಲ್ಡಿಂಗ್ ನಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ರಿವರ್ಸ್ ತೆಗೆಯುವ ವೇಳೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಅತೀ ವೇಗದಿಂದ ಪರಿವಾರ್ ಸ್ವೀಟ್ ಅಂಗಡಿಯ ಕಡೆಗೆ ಹಿಮ್ಮುಖವಾಗಿ ಚಲಿಸಿದೆ. ಇದರ ಪರಿಣಾಮ ಸಿಟಿ ಸೆಂಟರ್ […]