ಉಡುಪಿ: ರೋಟರಿ ಝೋನಲ್‌ ಕ್ರೀಡಾಕೂಟ ಉದ್ಘಾಟನೆ

ಮಣಿಪಾಲ: ರೊಟರಿ ಕ್ಲಬ್ ಮಣಿಪಾಲ ಟೌನ್ ವತಿಯಿಂದ ಝೋನ್ 4, RID 3182 ರ ROTACRWN ರೊಟರಿ ಝೋನಲ್ ಕ್ರೀಡಾಕೂಟವನ್ನು 2025ರ ನವೆಂಬರ್ 29 ಮತ್ತು 30ರಂದು MAHE ಮಣಿಪಾಲ ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಯಿತು.

ಉದ್ಘಾಟನಾ ಸಮಾರಂಭಕ್ಕೆ ಡಾ. (ಕಮಾಂಡರ್) ಅನಿಲ್ ರಾಣಾ ಅವರು ಮುಖ್ಯ ಅತಿಥಿಗಳಾಗಿದ್ದರು. ಸಮಾರೋಪ ಸಮಾರಂಭಕ್ಕೆ PDG ರೊಟೇರಿಯನ್ ರಾಜಾರಾಮ ಭಟ್ ಅವರು ಮುಖ್ಯ ಅತಿಥಿಗಳಾಗಿದ್ದರು. ರೊಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ರೊ. ದೀಪಕ್ ರಾಮ್ ಬಾಯಿರಿ, ಅಸಿಸ್ಟೆಂಟ್ ಗವರ್ನರ್ ರೊ. ಅಮಿತ್ ಅರವಿಂದ್, ಝೋನಲ್ ಲೆಫ್ಟಿನೆಂಟ್ ರೊ. ಡಾ. ಶ್ರೀಧರ್ ಡಿ, ರೊ. ಜನಾರ್ದನ ಭಟ್, ರೊ. ಸ್ಮಿತಾ ಕಾಮತ್, ರೊ. ಮೋಹನ್ ನಾಯಕ್ ಮತ್ತು ರೊ. ಶ್ರೀಧರ್ ಎಚ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಕ್ರೀಡಾಕೂಟದಲ್ಲಿ ರೊಟರಿ ಕ್ಲಬ್ ಮಣಿಪಾಲ ಟೌನ್ ಒಟ್ಟಾರೆ ಚಾಂಪಿಯನ್‌ಷಿಪ್ ಟ್ರೋಫಿ ಗೆದ್ದು ಕೀರ್ತಿ ಪಡೆದಿದೆ. ಕಾರ್ಯಕ್ರಮದ ನಿರೂಪಣೆಯನ್ನು ರೊ. ನಿತ್ಯಾನಂದ ನಾಯಕ್ ಅವರು ನಿಭಾಯಿಸಿದರು.