ಉಡುಪಿ: ರೋಟರಿ ಝೋನಲ್‌ ಕ್ರೀಡಾಕೂಟ ಉದ್ಘಾಟನೆ

ಮಣಿಪಾಲ: ರೊಟರಿ ಕ್ಲಬ್ ಮಣಿಪಾಲ ಟೌನ್ ವತಿಯಿಂದ ಝೋನ್ 4, RID 3182 ರ ROTACRWN ರೊಟರಿ ಝೋನಲ್ ಕ್ರೀಡಾಕೂಟವನ್ನು 2025ರ ನವೆಂಬರ್ 29 ಮತ್ತು 30ರಂದು MAHE ಮಣಿಪಾಲ ಮೈದಾನದಲ್ಲಿ ಭವ್ಯವಾಗಿ ಆಯೋಜಿಸಲಾಯಿತು. ಉದ್ಘಾಟನಾ ಸಮಾರಂಭಕ್ಕೆ ಡಾ. (ಕಮಾಂಡರ್) ಅನಿಲ್ ರಾಣಾ ಅವರು ಮುಖ್ಯ ಅತಿಥಿಗಳಾಗಿದ್ದರು. ಸಮಾರೋಪ ಸಮಾರಂಭಕ್ಕೆ PDG ರೊಟೇರಿಯನ್ ರಾಜಾರಾಮ ಭಟ್ ಅವರು ಮುಖ್ಯ ಅತಿಥಿಗಳಾಗಿದ್ದರು. ರೊಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ರೊ. ದೀಪಕ್ ರಾಮ್ ಬಾಯಿರಿ, ಅಸಿಸ್ಟೆಂಟ್ ಗವರ್ನರ್ ರೊ. […]

ಸರ್ವಿಸ್ ರಸ್ತೆ ಹಾಗೂ ಪ್ಲೈ ಓವರ್ ರಚಿಸಲು ವಿಸ್ತ್ರತ ಯೋಜನಾ ವರದಿಗೆ ಏಜೆನ್ಸಿ ನೇಮಕ

ಉಡುಪಿ: ಬ್ರಹ್ಮಾವರ, ಕೋಟ, ಪಡುಬಿದ್ರಿ ಹಾಗೂ ಮುಲ್ಕಿಯಲ್ಲಿ ಸರ್ವಿಸ್ ರಸ್ತೆ ಮತ್ತು ಪ್ಲೈ ಓವರ್ ರಚಿಸಲು ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಲು ಏಜೆನ್ಸಿ ನೇಮಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ -66 ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ತಿಳಿಸಿದರು. ಅವರು ಬ್ರಹ್ಮಾವರದ ಹೋಟೆಲ್ ಆಶ್ರಯ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸೆ.2ರಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ- ಉಳಿಸಿ ಹೋರಾಟ ಸಮಿತಿ ವತಿಯಿಂದ ಬೇಡಿಕೆಗಳ ಕುರಿತು […]

ರಾಷ್ಟ್ರವಾದಿ ಅಂಬೇಡ್ಕರ್ ತಿಲಕ್ ಪಟೇಲ್ ಯುವ ನ್ಯಾಯವಾದಿಗಳಿಗೆ ಆದರ್ಶ-ಆರೂರು ಸುಕೇಶ್ ಶೆಟ್ಟಿ

ಉಡುಪಿ:ಅದು 1919 ರ ಎಪ್ರಿಲ್ 13. ಪಂಜಾಬಿನ ನೆತ್ತಿಯ ಮೇಲೆ ಸುಡು ಬಿಸಿಲು. ಆದರೆ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಬ್ರಿಟಿಷ್ ದಬ್ಬಾಳಿಕೆಯ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದವರಿಗೆ ಬಿಸಿಲ ಬೇಗೆಗಿಂತಲೂ ದೇಶ ಪ್ರೇಮದ ಕಿಚ್ಚು ಉಕ್ಕಿ ಹರಿಯುತ್ತಿತ್ತು. ಜನರಲ್ ಡಯರ್ ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಗೆ ದೊಡ್ಡ ಸೈನ್ಯವನ್ನು ತಂದು ಮನಸೋ ಇಚ್ಚೆ ಗುಂಡಿನ ಮಳೆಯನ್ನೇ ಗೆರೆದು, ಭಾರತಾಂಬೆಯ ಸಹಸ್ರಾರು ಮಕ್ಕಳ ಪ್ರಾಣಪಕ್ಷಿಯನ್ನು ಕಿತ್ತುಕೊಂಡನು. ಪ್ರಿಯ ಓದುಗ ಮಿತ್ರರೇ, ವಕೀಲ ದಿನಾಚರಣೆಯ ಈ ಶುಭವಸರಕ್ಕೂ, ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೂ ಏನು […]

ಉಡುಪಿ ಜಿಲ್ಲೆಯಾದ್ಯಂತ ಆರ್ಟಿಫಿಶಲ್ ಇಂಟಲಿಜೆನ್ಸ್ ಸಂಚಾರ ವ್ಯವಸ್ಥೆ ಜಾರಿ: ಉಡುಪಿ ಎಸ್ ಪಿ

ಉಡುಪಿ: ಉಡುಪಿ ನಗರ ಹಾಗೂ ಜಿಲ್ಲೆಯಾದ್ಯಂತ ಸಂಚಾರ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಆರ್ಟಿಫಿಶಲ್ ಇಂಟೆಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ ಮೂಲಕ ದಂಡ ವಿಧಿಸುವ ಹಾಗೂ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಮಣಿಪಾಲದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ನಗರದಲ್ಲಿ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಮೂರು ಪ್ರಾಜೆಕ್ಟ್‌ಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿದೆ. ಇಂಟೆಲಿಜೆನ್ಸ್ ಟ್ರಾಫಿಕ್ ಮ್ಯಾನೆಜ್‌ಮೆಂಟ್ ಸಿಸ್ಟಮ್ ನಡಿ […]

ನಂದಿನಿ ಪಾರ್ಲರ್’ಗಳಲ್ಲಿ ಬೇರೆ ಬ್ರಾಂಡ್ ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದು: ಕೆಎಂಎಫ್ ಖಡಕ್ ಎಚ್ಚರಿಕೆ!

ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬೇರೆ ಬ್ರ್ಯಾಂಡ್‌ ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಲೈಸೆನ್ಸ್ ರದ್ದು ಮಾಡೋದಾಗಿ ಖಡಕ್ ಎಚ್ಚರಿಕೆ ನೀಡಿದೆ. ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಂಧನದ ನಂತರ ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಮತ್ತಷ್ಟು ಖಡಕ್ ಆಗಿ ನಕಲಿ ಶೂರರ ಹೆಡೆಮುರಿ ಕಟ್ಟಲು ನಿರ್ಧರಿಸಿದೆ. ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ನಡೆಸಿದ ಕಾರ್ಯಾಚರಣೆಯಲ್ಲಿ ನಕಲಿ ತುಪ್ಪದ ಜಾಲ […]