ಉಡುಪಿ ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ರೆನೋಲ್ಡ್‌ ಪ್ರವೀಣ್ ಕುಮಾರ್ ಗೆ ಜಯಭೇರಿ

ಉಡುಪಿ: ಉಡುಪಿ ವಕೀಲರ ಸಂಘದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರೆನೋಲ್ಡ್ ಪ್ರವೀಣ್‌ ಕುಮಾ‌ರ್ ಅವರು ಜಯಗಳಿಸಿ ಮೂಲಕ ಎರಡನೇ ಅವಧಿಗೆ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದ್ದಾರೆ.
ಇವರ ಪ್ರತಿಸ್ಪರ್ಧಿ ಜಯಪ್ರಕಾಶ್ ಕೆದ್ಲಾಯ ಅವರು ಕೊನೆಕ್ಷಣದವರೆಗೂ ಹೋರಾಟ ನೀಡಿ ಅಂತಿಮವಾಗಿ ಸೋಲೊಪ್ಪಿಕೊಂಡರು. ಸುಮಾರು 850 ಸದಸ್ಯರನ್ನೊಳಗೊಂಡ ಉಡುಪಿ ವಕೀಲರ ಸಂಘದ ಚುನಾವಣೆಯ ಮತ ಎಣಿಕೆ ಸಂಜೆ ಐದು ಗಂಟೆಯಿಂದ ರಾತ್ರಿ ಹತ್ತೂವರೆತನಕ ನಡೆಯಿತು.

ವಕೀಲರು ಫಲಿತಾಂಶಕ್ಕಾಗಿ ನ್ಯಾಯಾಲಯದ ಆವರಣದಲ್ಲಿ ತುದಿಗಾಲಲ್ಲಿ ನಿಂತಿದ್ದರು.ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಗೆದ್ದರೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚಂದ್ರಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದೇವದಾಸ್‌ ಶೆಟ್ಟಿಗಾ‌ರ್ ಅವರು ಪ್ರವೀಣ್‌ ಎಂ. ಪೂಜಾರಿ ವಿರುದ್ಧ ಜಯಗಳಿಸಿದ್ದಾರೆ. ಮಾಜಿ ಅಧ್ಯಕ್ಷ ಬಿ.ನಾಗರಾಜ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳು ಪಡೆದ ಮತಗಳಿಕೆಯ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.