ಉಡುಪಿ,ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ
ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ
ಜ್ಞಾನೇಶ್ ಪಿ ಪಾಲನ್, ಕೌಶಿಕ್ ಸನಿಲ್ ಮತ್ತು ನಿಕ್ಷಿತ್ ಎಚ್ ಪಾಲನ್ ಇವರ ತಂಡವು 12 ನವೆಂಬರ್ 2025 ರಂದು ಯೆನಪೋಯ
ಇನ್ಸ್ಟಿಟ್ಯೂಟ್ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ೨೧ನೇ ಕರ್ನಾಟಕ ರಾಜ್ಯ
ಮಟ್ಟದ ಐಎಸ್‌ಟಿಇ ವಿದ್ಯಾರ್ಥಿ ಸಮಾವೇಶ ೨೦೨೫ರ ಅಂಗವಾಗಿ
ಆಯೋಜಿಸಿದ್ದ ೨೪ ಗಂಟೆಗಳ ಹ್ಯಾಕಥಾನ್‌ನಲ್ಲಿ ನಗದು
ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ
ಮತ್ತು ಪ್ರಾಂಶುಪಾಲರು ಹೃತ್ಪೂರ್ವಕ
ಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತಾರೆ.

















