ಉಡುಪಿ ಪ್ರೀ ಓನ್ ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ಮಹಾಸಭೆ- ಕುಟುಂಬ‌ ಸಮ್ಮಿಲನ ಕಾರ್ಯಕ್ರಮ

ಉಡುಪಿ: ಪ್ರೀ ಓನ್ ಡ್ ವಹಿಕಲ್ ಡೀಲರ್ಸ್ ಅಸೋಸಿಯೇಷನ್, ಉಡುಪಿ (pre owned vehicle dealers association Udupi) ಇದರ ಮೂರನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಉಡುಪಿ ಕರಾವಳಿ ಬೈಪಾಸ್ ಬಳಿಯ ಹೋಟೆಲ್ ರಂಜಿತಾ ಪ್ಯಾಲೇಸ್ (ಮಣಿಪಾಲ ಇನ್) ಸಭಾಂಗಣದಲ್ಲಿ ನಡೆಯಿತು.

ಪ್ರೀ ಓನ್ ಡ್ ವಹಿಕಲ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಇದರ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ಜರುಗಿತು. ಕಾರ್ಯದರ್ಶಿ ಉದಯ್ ಕಿರಣ್ ಅವರು ವರದಿ ಮಂಡಿಸಿದರು. ಕೋಶಾಧಿಕಾರಿ ಸಜಿ ಪಿಳ್ಲೈ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಕ್ರೀಡೆ ಹಾಗೂ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.ರಝುಕ್ ಮಾಸ್ಟರ್ ಸ್ವಾಗತಿಸಿದರು. ಅಲ್ವಿನ್ ಪಿಂಟೋ ಹಾಗೂ ನಿತಿನ್ ಕುಮಾರ್ ಪ್ರಾರ್ಥಿಸಿದರು. ನಿತಿನ್ ಕುಮಾರ್ ವಂದಿಸಿದರು.