ರಾಜಸ್ಥಾನದ ಪುಷ್ಕರ್ ಪ್ರದೇಶದಲ್ಲಿ ಇಂದು ಬಹಳಷ್ಟು ರೈತರು ನೆಲ್ಲಿಕಾಯಿ (ಆಮ್ಲಾ) ಬೆಳೆ ಬೆಳೆಯುತ್ತಿದ್ದಾರೆ. ಬೆಳೆದು ಭರ್ಜರಿ ಲಾಭ ಕೂಡ ಪಡೆಯುತ್ತಿದ್ದಾರೆ. ಹಾಗಾಗಿ ರಾಜಸ್ಥಾನ ರೈತರ ಈ ಮಾದರಿ. ದೇಶದ ಕೃಷಿಕರನ್ನೂ ನೆಲ್ಲಿಕಾಯಿ ಬೆಳೆಯುವಲ್ಲಿ ಸೆಳೆಯುತ್ತಿದೆ ಈ ಪ್ರದೇಶದ ಮಣ್ಣು ಮತ್ತು ಹವಾಮಾನವು ಈ ಬೆಳೆಗೆ ತುಂಬಾನೇ ಸೂಕ್ತವಾಗಿರುವುದರಿಂದ ಸಾಂಪ್ರದಾಯಿಕ ಬೆಳೆಗಳಿಂದ ದೂರಾಗಿ ರೈತರು ನೆಲ್ಲಿಕಾಯಿ ತೋಟಗಳನ್ನು ಸ್ಥಾಪಿಸಿದ್ದಾರೆ.
ನೆಲ್ಲಿಕಾಯಿ ಗಿಡವನ್ನು ಒಮ್ಮೆ ನೆಟ್ಟರೆ, ಸುಮಾರು 25 ರಿಂದ 30 ವರ್ಷಗಳವರೆಗೆ ಅದು ಫಲ ಕೊಡುತ್ತದೆ. ಇದರಿಂದ ರೈತರಿಗೆ ದೀರ್ಘಾವಧಿಯಲ್ಲಿ ಸ್ಥಿರವಾದ ಆದಾಯ ದೊರೆಯುತ್ತದೆ. ಈ ಗಿಡಕ್ಕೆ ಹೆಚ್ಚು ನೀರು ಅಥವಾ ಹೆಚ್ಚಿನ ಕೆಲಸ ಬೇಕಾಗುವುದಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ಕಾಳಜಿ ಕೊಟ್ಟರೆ ಸಾಕು.

ನೆಲ್ಲಿಕಾಯಿ ಹಣ್ಣಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ. ಇದರಿಂದ ಜ್ಯೂಸ್, ಕ್ಯಾಂಡಿ, ಜಾಮ್, ಪೌಡರ್ ಮೊದಲಾದ ಅನೇಕ ಉತ್ಪನ್ನಗಳನ್ನು ತಯಾರಿಸಲು ಸಾಧ್ಯ. ಈ ಉತ್ಪನ್ನಗಳಿಂದ ರೈತರು ಹೆಚ್ಚುವರಿ ಲಾಭ ಗಳಿಸಬಹುದು.
ಪುಷ್ಕರ್ನ ರೈತರು ಈಗ ಹನಿ ನೀರಾವರಿ ವಿಧಾನ, ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಸರ್ಕಾರದಿಂದ ಸಿಗುವ ಯೋಜನೆಗಳ ಸಹಾಯವನ್ನು ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ ನೆಲ್ಲಿಕಾಯಿ ಉತ್ಪಾದನೆ ಇನ್ನಷ್ಟು ಹೆಚ್ಚಾಗಿದೆ.
ಒಟ್ಟಿನಲ್ಲಿ, ಕಡಿಮೆ ಶ್ರಮ, ದೀರ್ಘಕಾಲದ ಫಲ ಹಾಗೂ ನಿರಂತರ ಮಾರುಕಟ್ಟೆ ಬೇಡಿಕೆ – ಈ ಮೂರು ಕಾರಣಗಳಿಂದ ನೆಲ್ಲಿಕಾಯಿ ಬೆಳೆ ಈಗ ಅನೇಕ ರೈತರ ವಿಶ್ವಾಸದ ಬೆಳೆಯಾಗಿದೆ.

















