ಉಡುಪಿಯ ಪ್ರಖ್ಯಾತ ಸ್ಟಾರ್ ಹೋಟೆಲ್ ನಲ್ಲಿ ಉದ್ಯೋಗವಕಾಶ!
ಕಾರ್ಕಳ:ಮದುಮಗ ನಾಪತ್ತೆ

ಕಾರ್ಕಳ: ಮದುವೆಯಾದ ಒಂದೇ ವಾರದಲ್ಲಿ ಮದುಮಗ ನಾಪತ್ತೆಯಾಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ವಸಂತ ಬಿ. ಎಂದು ಗುರುತಿಸಲಾಗಿದೆ. ಇವರು ಕಾರ್ಕಳ ಈದು ಗ್ರಾಮದ ಶರ್ಮೀಳಾ ಎ.ಸಿ ಎಂಬವರನ್ನು ಅ.29ರಂದು ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಮದುವೆಯಾಗಿದ್ದರು. ನ.6ರಂದು ಪತ್ನಿ ಜೊತೆ ಪತ್ನಿಯ ಮನೆ ಈದು ಗ್ರಾಮಕ್ಕೆ ಬಂದಿದ್ದು, ನ.7ರಂದು ದೇವಸ್ಥಾನಗಳಿಗೆ ಹೋಗಿ, ಸಂಜೆ 4 ಗಂಟೆಗೆ ಹೊಸ್ಮಾರು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಅವರ […]
ದೇಶದ ಕೃಷಿಕರು ನೆಲ್ಲಿಕಾಯಿ ಬೆಳೆಸಲು ಸ್ಪೂರ್ತಿ ಕೊಟ್ಟ ರಾಜಸ್ಥಾನದ ಕೃಷಿಕರ ಮಾದರಿ ನೆಲ್ಲಿ ಕೃಷಿ!

ರಾಜಸ್ಥಾನದ ಪುಷ್ಕರ್ ಪ್ರದೇಶದಲ್ಲಿ ಇಂದು ಬಹಳಷ್ಟು ರೈತರು ನೆಲ್ಲಿಕಾಯಿ (ಆಮ್ಲಾ) ಬೆಳೆ ಬೆಳೆಯುತ್ತಿದ್ದಾರೆ. ಬೆಳೆದು ಭರ್ಜರಿ ಲಾಭ ಕೂಡ ಪಡೆಯುತ್ತಿದ್ದಾರೆ. ಹಾಗಾಗಿ ರಾಜಸ್ಥಾನ ರೈತರ ಈ ಮಾದರಿ. ದೇಶದ ಕೃಷಿಕರನ್ನೂ ನೆಲ್ಲಿಕಾಯಿ ಬೆಳೆಯುವಲ್ಲಿ ಸೆಳೆಯುತ್ತಿದೆ ಈ ಪ್ರದೇಶದ ಮಣ್ಣು ಮತ್ತು ಹವಾಮಾನವು ಈ ಬೆಳೆಗೆ ತುಂಬಾನೇ ಸೂಕ್ತವಾಗಿರುವುದರಿಂದ ಸಾಂಪ್ರದಾಯಿಕ ಬೆಳೆಗಳಿಂದ ದೂರಾಗಿ ರೈತರು ನೆಲ್ಲಿಕಾಯಿ ತೋಟಗಳನ್ನು ಸ್ಥಾಪಿಸಿದ್ದಾರೆ. ನೆಲ್ಲಿಕಾಯಿ ಗಿಡವನ್ನು ಒಮ್ಮೆ ನೆಟ್ಟರೆ, ಸುಮಾರು 25 ರಿಂದ 30 ವರ್ಷಗಳವರೆಗೆ ಅದು ಫಲ ಕೊಡುತ್ತದೆ. ಇದರಿಂದ ರೈತರಿಗೆ […]
ಕಾರ್ಕಳ: ಹೃದಯಾಘಾತದಿಂದ ಯುವಕ ಮೃತ್ಯು.

ಕಾರ್ಕಳ: ಕಾರ್ಕಳ ಅಜೆಕಾರಿನ ಯುವಕ ಪುನೀತ್ ಕುಮಾರ್ ಶೆಟ್ಟಿ (38) ಮಣಿಪಾಲ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶನಿವಾರ ನಿಧನರಾದರು. ಇವರು ಕಾರ್ಕಳ ತಾಲೂಕಿನ ಅಜೆಕಾರು ಮೊಗಂಟೆಯ ನಿವಾಸಿಯಾಗಿದ್ದು, ಸೆಲ್ಕೋ ಸೊಲಾರ್‌ನ ಕಾರ್ಕಳದ ಪ್ರತಿನಿಧಿಯಾಗಿದ್ದರು. ಇವರಿಗೆ ಶುಕ್ರವಾರ ರಾತ್ರಿ ಹೃದಯಘಾತವಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಅವರು ನಿಧನರಾದರು. ಪುನೀತ್ ಶೆಟ್ಟಿ ಅವರು ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಸರಕಾರಿ ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೌರ ವಿದ್ಯುತ್ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದು, […]