ಉಡುಪಿ: ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಇದೇ ಅಕ್ಟೋಬರ್17, 18 ಮತ್ತು 19ರಂದು ಮೂರು ದಿನಗಳ “ಬೃಹತ್ ಸೀರೆ ಮೇಳ”ವನ್ನು ಬ್ರಹ್ಮಾವರ ಕೃಷಿ ಕೇಂದ್ರ ಮುಂಭಾಗದಲ್ಲಿರುವ ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಸ್ಟೋರ್ ನಲ್ಲಿ ಆಯೋಜಿಸಲಾಗಿದೆ.
ಪ್ರಪ್ರಥಮ ಬಾರಿಗೆ ರೀಟೈಲ್ ದರದಲ್ಲಿ ಸೀರೆಗಳನ್ನು ಮಾರಾಟ ಮಾಡಲಾಗುವುದು. ಸುಮಾರು 50 ಸಾವಿರ ಸೀರೆಗಳ ಸಂಗ್ರಹವಿದೆ ಎಂದು ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಮಾಲಕಿ ಅಂಜಲಿ ವಿಜಯ್ ತಿಳಿಸಿದರು.
ಬ್ರಹ್ಮಾವರದ ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಸ್ಟೋರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸುಮಾರು 800-900 ರೂ ಬೆಲೆಯ ಸೀರೆಯನ್ನು ನಾವು ಕೇವಲ ರೂ.599 ರೂ. ಮಾರಾಟ ಮಾಡುತ್ತಿದ್ದೇವೆ. ಸಾಫ್ಟ್ ಸಿಲ್ಕ್ ಸೀರೆಯನ್ನು ರೂ. 1500 ಬೆಲೆಯಲ್ಲಿ ಮಾರಾಟ ಮಾಡಲಿದ್ದೇವೆ. ನಾವೇ ತಯಾರಿಸಿ ಎಂಬ್ರಾಯ್ಡರಿ ಮಾಡಿದ ಸೀರೆ, ಕಾಟನ್ ಸೀರೆಗಳು, ಲೆನಿನ್ ಸೀರೆಗಳು ಕೂಡ ಇವೆ. ಅತಿ ಕಡಿಮೆ ಬೆಲೆಯ ಸೀರೆಗಳಲ್ಲದೆ 10 ಸಾವಿರ, 15 ಸಾವಿರ, 1.50 ಲಕ್ಷ ಬೆಲೆಯ ಸೀರೆಗಳು ಕೂಡ ಲಭ್ಯವಿದೆ. 1.50 ಲಕ್ಷ ಮೌಲ್ಯದ ಸೀರೆಯನ್ನು ಚಿನ್ನದ ಜರಿ ಹಾಕಿ ಸಿದ್ದಪಡಿಸಿದ್ದೇವೆ. ಆ ಸೀರೆಯಲ್ಲಿ ಎಷ್ಟು ಪರ್ಸೆಂಟೇಜ್ ಗೋಲ್ಡ್ ಇದೆ ಎಂಬ ಬಗ್ಗೆ ರಿಪೋರ್ಟ್ ಕೊಡಲಿದ್ದೇವೆ. ಅದರ ಸಿಲ್ಕ್ಗೂ ಗ್ಯಾರೆಂಟಿ ಕೊಡಲಿದ್ದೇವೆ. ಸಾಧಾರಣ ಈಗ ಒಂದೂವರೆ ಲಕ್ಷ ಬೆಲೆ ಇದ್ದರೆ 10 ವರ್ಷ ಬಿಟ್ಟು ಅದನ್ನು ಮಾರಾಟ ಮಾಡಿದರೂ ಅದರ ದುಡ್ಡು ಖರೀದಿಸಿದ ಗ್ರಾಹಕರಿಗೆ ಸಿಗಲಿದೆ. ಇಂತಹ ಸೀರೆಗಳನ್ನು ಹೂಡಿಕೆಯಾಗಿಯೂ ಖರೀದಿಸಬಹುದಾಗಿದೆ ಎಂದರು.
ಬ್ರಹ್ಮಾವರ ಕೃಷಿಕೇಂದ್ರದ ಎದುರು ಇರುವ ನಮ್ಮ ಸ್ಟೋರ್ನಲ್ಲಿ ಇದುವರೆಗೆ ರೀಟೈಲ್ ಮಾರಾಟ ಮಾಡಿಲ್ಲ. ಮೊದಲ ಬಾರಿಗೆ ರೀಟೈಲ್ ದರದಲ್ಲಿ ಸೀರೆಗಳನ್ನು ಮಾರಾಟ ಮಾಡುತ್ತಿದ್ದೇವೆ. ಮೂರು ದಿನದ ಬೃಹತ್ ಸೀರೆ ಮೇಳದಲ್ಲಿ ಭಾರತದ ಎಲ್ಲಾ ರಾಜ್ಯಗಳ ವಿನ್ಯಾಸದ ಬಗೆ ಬಗೆಯ ಸೀರೆಗಳನ್ನು ಮಾರಾಟ ಮಾಡಲಾಗುವುದು. ಅಲ್ಲದೆ, ನಮ್ಮದೇ ಮಗ್ಗಗಳಲ್ಲಿ ಕಾಂಜೀವರಂ ಸೀರೆಗಳನ್ನು ನಾವೇ ತಯಾರು ಮಾಡಿಸಿ, ನಾವೇ ಪ್ರಿಂಟಿಂಗ್ ಮಾಡಿ ಮಾರಾಟ ಮಾಡುತ್ತಿದ್ದೇವೆ. ಮುಂದೆ ಬ್ರಹ್ಮಾವರದಲ್ಲೇ ಒಂದು ಪ್ರಿಂಟಿಂಗ್ ಯುನಿಟ್ ಮಾಡಲಿದ್ದೇವೆ. ಇಲ್ಲಿಯೇ ಮಗ್ಗಗಳು ನೇಕಾರರನ್ನು ಕರೆಸಿಕೊಂಡು ಇಲ್ಲಿಯೇ ಸೀರೆಗಳನ್ನು ತಯಾರು ಮಾಡಿಸಿ ಜನರಿಗೆ ಕೊಡಲಿದ್ದೇವೆ. ಈ ಬಾರಿಯ ಸೀರೆ ಮೇಳದಲ್ಲಿ ಸಾಕಷ್ಟು ರಿಯಾಯಿತಿ ಬೆಲೆಯಲ್ಲಿ ಸೀರೆಗಳನ್ನು ನಾವು ಮಾರಾಟ ಮಾಡುತ್ತಿದ್ದೇವೆ. 30-40 ರೀತಿಯ ಸೀರೆಗಳಿದ್ದು ಎಲ್ಲಾ ರಾಜ್ಯಗಳ ಸೀರೆಗಳ ಸ್ಟಾಕ್ ಮಾಡಿದ್ದೇವೆ ಎಂದು ಅವರು ಹೇಳಿದರು.
ಸುಮಾರು ಮೂವರೆ ಎಕ್ರೆ ಜಾಗ ಖರೀದಿ ಮಾಡಿದ್ದು, ಈ ಜಾಗದಲ್ಲಿ ಮಗ್ಗಗಳನ್ನು ಹಾಕಿ ಇಲ್ಲಿನ ಜನರಿಗೆ ತರಬೇತಿ ನೀಡಿ ಜನರಿಗೆ ಕೆಲಸ ಕೊಡಲಿದ್ದೇವೆ. ತರಬೇತಿ ಪಡೆದ ನಂತರ ಮನೆಯಲ್ಲೇ ಮಗ್ಗ ಹಾಕಿಕೊಂಡಲ್ಲಿ ಅಂತವರಿಗೆ ವಿಜಯಲಕ್ಷ್ಮೀ ಸಾರೀಸ್ ವತಿಯಿಂದಲೇ ನಾವು ಕೆಲಸ ಕೊಡಲಿದ್ದೇವೆ. ಅವರು ಸಿದ್ದಪಡಿಸುವ ಸೀರೆಯನ್ನು ನಾವೇ ತೆಗೆದುಕೊಳ್ಳಲಿದ್ದೇವೆ. ಬ್ರಹ್ಮಾವರ ಸುತ್ತಮುತ್ತ ಅಲ್ಲಲ್ಲಿ ಮೀಟಿಂಗ್ಗಳನ್ನು ಮಾಡಲಿದ್ದು ಅಲ್ಲಿ ಕೆಲಸ ಮಾಡುವ ಆಸಕ್ತರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಿದ್ದೇವೆ. ನಮ್ಮ ಊರಿನ ಜನರಿಗೂ ಒಂದಷ್ಟು ಕೆಲಸ ಕೊಡಿಸುವ ಉದ್ದೇಶವೂ ಇದೆ ಎಂದರು.

















