ವೈದ್ಯೆ ಪತ್ನಿಗೆ ಇಂಜೆಕ್ಷನ್ ನೀಡಿ ಕೊಂದ ಸರ್ಜನ್: ಮಣಿಪಾಲದಲ್ಲಿ ಆರೋಪಿಯ ಬಂಧನ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ತನ್ನ ಪತ್ನಿಯನ್ನು ಕೊಲೆ ಮಾಡಿರುವುದು 6 ತಿಂಗಳ ಬಳಿಕ ಎಫ್‌ಎಸ್‌ಎಲ್ ವರದಿ ಮೂಲಕ ಬಹಿರಂಗಗೊಂಡಿದೆ. ಸದ್ಯ ಈ ಸಂಬಂಧ ಬೆಂಗಳೂರು ಪೊಲೀಸರು ಡಾ. ಮಹೇಂದ್ರ ರೆಡ್ಡಿ ಎಂಬಾತನನ್ನು ಮಣಿಪಾಲದಲ್ಲಿ ಅರೆಸ್ಟ್ ಮಾಡಿದ್ದಾರೆ. ಡಾ ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಇಬ್ಬರು 2024ರ ಮೇ 26ರಂದು ಎರಡು ಕುಟುಂಬಗಳ ಒಪ್ಪಂದಂತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೃತಿಕಾ ಡೆರ್ಮೆಟಾಲಜಿಸ್ಟ್ ಆಗಿದ್ದರೇ, ಈಕೆಯ ಗಂಡ ಡಾ ಮಹೇಂದ್ರ ರೆಡ್ಡಿ ಜನರಲ್ ಸರ್ಜನ್ […]

ಅ.17, 18, 19ರಂದು ಬ್ರಹ್ಮಾವರದಲ್ಲಿ ಬೃಹತ್ ಸೀರೆ ಮೇಳ

ಉಡುಪಿ: ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಇದೇ ಅಕ್ಟೋಬರ್17, 18 ಮತ್ತು 19ರಂದು ಮೂರು ದಿನಗಳ “ಬೃಹತ್ ಸೀರೆ ಮೇಳ”ವನ್ನು ಬ್ರಹ್ಮಾವರ ಕೃಷಿ ಕೇಂದ್ರ ಮುಂಭಾಗದಲ್ಲಿರುವ ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಸ್ಟೋರ್ ನಲ್ಲಿ ಆಯೋಜಿಸಲಾಗಿದೆ. ಪ್ರಪ್ರಥಮ ಬಾರಿಗೆ ರೀಟೈಲ್ ದರದಲ್ಲಿ ಸೀರೆಗಳನ್ನು ಮಾರಾಟ ಮಾಡಲಾಗುವುದು. ಸುಮಾರು 50 ಸಾವಿರ ಸೀರೆಗಳ ಸಂಗ್ರಹವಿದೆ ಎಂದು ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಮಾಲಕಿ ಅಂಜಲಿ ವಿಜಯ್ ತಿಳಿಸಿದರು. ಬ್ರಹ್ಮಾವರದ ಅಂಜಲೀಸ್ ವಿಜಯಲಕ್ಷ್ಮೀ ಸಾರೀಸ್ ಸ್ಟೋರ್ ನಲ್ಲಿ ನಡೆದ […]

ಶಿರ್ವ: ಕಬ್ಬಿಣದ ಸೆಂಟ್ರಿಂಗ್‌ ಶೀಟ್ ಕಳ್ಳತನ: ಅಂತರ್ ಜಿಲ್ಲಾ ಕಳ್ಳನ ಬಂಧನ

ಉಡುಪಿ: ಒಂದು ವಾರದ ಹಿಂದೆ ಶಿರ್ವಾ ಗ್ರಾಮದ ಬಂಟಕಲ್ಲು ಎಂಬಲ್ಲಿ ಮನೆಯೊಂದರ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್‌ ಶೀಟುಗಳನ್ನು ಕಳ್ಳತನಗೈದ ಪ್ರಕರಣವನ್ನು‌ ಬೇಧಿಸಿದ ಶಿರ್ವ ಪೊಲೀಸರು, ಓರ್ವ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೈಂದೂರಿನ ಶಿರೂರು ಗ್ರಾಮದ ರಶೀದ್‌ ಯಾನೆ ರಶೀದ್‌ ಮೊಯಿದ್ದೀನ್‌(40) ಬಂಧಿತ ಆರೋಪಿ. ಅ.3ರಿಂದ ಅ.6ರ ಮಧ್ಯೆ ಕಳ್ಳತನ ನಡೆದಿತ್ತು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟಕಲ್‌ […]

ಪ್ರಸಕ್ತ ವರ್ಷದಿಂದ ಶೇ.33 ಅಂಕ ಪಡೆದರೆ SSLC ಉತ್ತೀರ್ಣ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಇನ್ನು ಮುಂದೆ SSLCಯಲ್ಲಿ ಶೇ. 33 ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ವರ್ಷದಿಂದಲೇ ಖಾಸಗಿ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ ಶೇ. 33 ಅಂಕ ಪಡೆದರೆ SSLC ಉತ್ತೀರ್ಣ ಎಂದು ಘೋಷಿಸಲಾಗುವುದು. 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ ಶೇ. 33 ಪಡೆಯಬೇಕಾಗುತ್ತದೆ ಎಂದು […]

ಉಡುಪಿ: ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಮಹಿಳೆಯರಿಗೆ ಉಡುಪಿಯಲ್ಲಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶ. ಉಡುಪಿ MNC ಗೆ ಡಿಗ್ರಿ ಆಗಿರುವ 30 ವರ್ಷ ಮೇಲ್ಪಟ್ಟ ಮಹಿಳೆಯರು ಬೇಕಾಗಿದ್ದಾರೆ. ವೇತನ: ತಿಂಗಳಿಗೆ 22,000 ದಿಂದ 30,000 ಜೊತೆಗೆ ಪಿಎಫ್, ಇಎಸ್ಐ ಕಲ್ಪಿಸಲಾಗಿದೆ. ಕಚೇರಿ ಸಮಯ: ಬೆಳಗ್ಗೆ 9:30 ರಿಂದ ಸಂಜೆ 5:30 ರವರೆಗೆ.ಆಸಕ್ತರು ಕೂಡಲೆ ಸಂಪರ್ಕಿಸಿ:ಮೊ: 93433 49670