ಕತೆ ಬರೆಯುವ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶ: ರಾಜ್ಯಮಟ್ಟದ ಕಥಾ ಸ್ಪರ್ಧೆಗೆ ಆಹ್ವಾನ

ಬೆಂಗಳೂರು: ವಿಶ್ವ ವಿದ್ಯಾರ್ಥಿ ದಿನ (ಅಕ್ಟೋಬರ್ 15) ದ ಪ್ರಯುಕ್ತ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಇದರ ಕರ್ನಾಟಕ ಘಟಕವು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ.

ಕಥೆಯ ವಿಷಯದ ಕುರಿತು ಬರಹಗಾರರು ಸ್ವತಂತ್ರರಾಗಿದ್ದು ಕನಿಷ್ಠ ಎಂಟು ನೂರು ಪದಗಳನ್ನು ಹೊಂದಿರಬೇಕು. ಕಥೆಯು ಸ್ವಂತದಾಗಿದ್ದು, ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಇರಬಹುದು. ಕಥೆ ಕಳುಹಿಸುವಾಗ ನಿಮ್ಮ ಹೆಸರು, ವಿಳಾಸ, ಕಾಲೇಜು ಅಥವಾ ಸಂಸ್ಥೆಯ ಹೆಸರು, ವಿದ್ಯಾರ್ಥಿ ಯ ಐಡಿಯ ನಕಲಿ ಪ್ರತಿ ಮತ್ತು ಮೊಬೈಲ್ ಸಂಖ್ಯೆ ಒದಗಿಸಬೇಕು. ಸ್ಪರ್ಧೆಗೆ ಕಳುಹಿಸಿಕೊಟ್ಟ ಕಥೆಯ ಸಂಪೂರ್ಣ ಹಕ್ಕು ಆಯೋಜಕರದ್ದಾಗಿರುತ್ತದೆ. ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಕಥೆಗೆ ಪ್ರಥಮ ಬಹುಮಾನ ಹತ್ತು ಸಾವಿರ ನಗದು ಮತ್ತು ಪ್ರಮಾಣ ಪತ್ರ, ದ್ವೀತಿಯ ಏಳು ಸಾವಿರ ನಗದು ಮತ್ತು ಪ್ರಮಾಣ ಪತ್ರ ಹಾಗೂ ತೃತೀಯ ಐದು ಸಾವಿರ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಕಥೆ ಕಳುಹಿಸಲು ಕೊನೆಯ ದಿನಾಂಕ ನವೆಂಬರ್ 30. ಕಥೆಯನ್ನು ಇಮೇಲ್ ಅಥವಾ ಪೋಸ್ಟ್ ಮೂಲಕ ಕಳುಹಿಸಿಕೊಡಬಹುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಮೇಲ್: [email protected]

ಅಂಚೆ: ಕಲ್ಚರಲ್ ಡಿಪಾರ್ಟ್ಮೆಂಟ್ ಎಸ್.ಐ.ಓ ಕರ್ನಾಟಕ –
#7 ಎಸ್.ಆರ್.ಕೆ ಗಾರ್ಡನ್, ಜಯನಗರ ಈಸ್ಟ್, ಬೆಂಗಳೂರು – 560041

ಹೆಚ್ಚಿನ ಮಾಹಿತಿಗೆ : 8050101458, 9663810718