ಅ 5 ರಂದು ಪರ್ಯಾಯ ಮಹೋತ್ಸವದ  ಪೂರ್ವಭಾವಿ ಸಮಾಲೋಚನಾ ಸಭೆ

ಉಡುಪಿ: ಭಾವಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಹೋತ್ಸವವನ್ನು ವೈಶಿಷ್ಟ್ಯ ಪೂರ್ಣ ಹಾಗೂ ಪರಿಸರ ಪೂರಕವಾಗಿ ನಡೆಸುವ ಸಲುವಾಗಿ ಪೂರ್ವಭಾವಿ ಸಮಾಲೋಚನಾ ಸಭೆಯು  ಅ 5 ರಂದು ಸಾಯಂಕಾಲ 4.30 ಗಂಟೆಗೆ  ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನ ಮಿನಿ ಹಾಲಿನಲ್ಲಿ  ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ  ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆಯಲಿದೆ.

ಈ ಸಭೆಗೆ ಮಠದ ಶಿಷ್ಯರು,ಅಭಿಮಾನಿಗಳು,ಭಕ್ತಾಭಿಮಾನಿಗಳು ಆಗಮಿಸಿ ತಮ್ಮ ಸೂಕ್ತ ಸಲಹೆ ಸೂಚನೆಯನ್ನು ನೀಡಿ ಪರ್ಯಾಯೋತ್ಸವ ಯಶಸ್ವಿಯಾಗುವಲ್ಲಿ ಸಹಕರಿಸಬೇಕೆಂದು ಶ್ರೀ  ಮಠದ ಪ್ರಕಟಣೆ ತಿಳಿಸಿದೆ.