ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಕಲೆಕ್ಷನ್ 100 ಕೋಟಿ ಗಳಿಕೆ ಮಾಡಿದೆ. ಬಿಡುಗಡೆಯಾದ ಬರೀ 5 ದಿನಕ್ಕೆ ನೂರು ಕೋಟಿ ಕಲೆಕ್ಷನ್ ಮಾಡಿ ಎಲ್ಲರನ್ನು ಆಶ್ಚರ್ಯ ಆಗುವಂತೆ ಮಾಡಿದೆ. ಈ ಹಿಂದೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಮಾತ್ರವಲ್ಲದೆ ಮರಾಠಿಯ ಸಿನಿಮಾ ಕೂಡ ನೂರು ಕೋಟಿ ಗಳಿಕೆ ಮಾಡಿತ್ತು. ಕನ್ನಡ ಸಿನಿಮಾಭಿಮಾನಿಗಳು ನಮ್ಮ ಸಿನಿಮಾಗಳು ಯಾವಾಗ ಈ ರೀತಿ ಮಾಡೋದು ಅಂತ ಕಾಯುತ್ತಿದ್ದರು.
ಅಂತೂ ಕನ್ನಡದ ‘ಕೆಜಿಎಫ್’ ಸಿನಿಮಾ ಬರೀ 5 ದಿನಕ್ಕೆ 100 ಕೋಟಿಯನ್ನು ಗಳಿಸಿದೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ. ಶುಕ್ರವಾರ ರಿಲೀಸ್ ಆದ ಈ ಸಿನಿಮಾಗೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು, ದಿನದಿಂದ ದಿನಕ್ಕೆ ಇದರ ಕಲೆಕ್ಷನ್ ಹೆಚ್ಚಾಗುತ್ತಿದೆ. ಸುಮಾರು 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಕೆಜಿಎಫ್’ ಈಗ ನೂರು ಕೋಟಿಯ ಗಡಿ ದಾಟಿದೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಹಿಂದಿನ ಕನ್ನಡದ ಎಲ್ಲ ದಾಖಲೆಗಳನ್ನು ‘ಕೆಜಿಎಫ್’ ಹಿಂದಿಕ್ಕಿದೆ.