ಮಲ್ಪೆ ಕಡಲತೀರದಲ್ಲಿ ಕೇರಳ ಸಮಾಜದಿಂದ ಬಲಿತರ್ಪಣಂ; ಎಪ್ಪತ್ತಕ್ಕೂ ಅಧಿಕ ಕುಟುಂಬಗಳಿಂದ ಅಗಲಿದ ಪಿತೃಗಳಿಗೆ ತರ್ಪಣ

ಉಡುಪಿ: ತುಳು ನಾಡಿನಲ್ಲಿ‌ ಆಟಿ ಅಮಾವಾಸ್ಯೆಗೆ ಅದರದ್ದೇ ಆದ ವಿಶೇಷ ಮಹತ್ವವಿದೆ.‌ ಹಾಲೆ ಮರದ ಕಷಾಯ ಕುಡಿದು ಸರ್ವರೋಗದಿಂದ ವರ್ಷವಿಡೀ ದೂರವಿದ್ರೆ ಇನ್ನೊಂದೆಡೆ ಅಗಲಿದ ಪಿತೃಗಳಿಗೆ ತರ್ಪಣ ಬಿಡುವ ಧಾರ್ಮಿಕ ವಿಧಿವಿಧಾನಕ್ಕೆ ಇಂದು ವಿಶೇಷ ಮಹತ್ವ. ಈ ವಿಶೇಷ ದಿನದಲ್ಲಿ ಕೇರಳ‌ ಸಮಾಜ ಕೂಡ ತುಳುನಾಡಿನಲ್ಲಿ ಮೊದಲ ಬಾರಿ ಪಿತೃಗಳಿಗೆ ತರ್ಪಣ ಬಿಟ್ಟಿದ್ದಾರೆ.

ಹೌದು, ಕೇರಳದಿಂದ ಕರಾವಳಿಗೆ ಬಂದು ನೆಲೆಸಿರುವ ನೂರಾರು ಮಂದಿ ಇಷ್ಟರವರೆಗೆ ಕರಾವಳಿಯ ಪದ್ದತಿಯಂತೆ ತರ್ಪಣ‌ ಬಿಡುತ್ತಿದ್ದರು. ಆದರೆ ಇದೇ ಮೊದಲು ಕೇರಳ ಸಮಾಜಂ ಸಂಸ್ಥೆ ಕೇರಳದಿಂದ ನುರಿತ ತಂತ್ರಿಗಳನ್ನ ಕರೆಸಿ ಅಲ್ಲಿನ ಪದ್ದತಿಯಂತೆ ವಿಧಿವಿಧಾನಗಳನ್ನ ನಡೆಸಿ ಅಗಲಿದ ಪಿತೃಗಳಿಗೆ ತರ್ಪಣ ಬಿಡಲಾಯಿತು. ಉಡುಪಿಯ‌ ಮಲ್ಪೆ ಕಡಲತೀರದಲ್ಲಿ ನಡೆದ ಬಲಿತರ್ಪಣಂ ನಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ಕುಟುಂಬ ಈ ವಿಧಿವಿಧಾನದಲ್ಲಿ ಪಾಲ್ಗೊಂಡು ತರ್ಪಣ ಬಿಡುವ ಮೂಲಕ ಸಂತೃಪ್ತಭಾವವನ್ನ ವ್ಯಕ್ತಪಡಿಸಿದರು.

ಇಷ್ಟರವರೆಗೆ ಕೇರಳದ ಓಣಂ ಆಚರಣೆ ಉಡುಪಿಯಲ್ಲಿ ನಡಿತಾಯಿತ್ತು.‌ಆದ್ರೆ ಇದೇ ಮೊದಲ ಬಾರಿಗೆ ತರ್ಪಣ ಬಿಡುವ ಮಹತ್ವದ ಕೆಲಸ ಉಡುಪಿಯ‌ ಮಲ್ಪೆ ಕಡಲತೀರದಲ್ಲಿ ನಡೆಸಿದೆ. ಕೇರಳ ಮೂಲದ ಕುಟುಂಬಿಕರು ಈ ಆಯೋಜನೆ ಮೂಲಕ ನಿಜವಾಗಿಯೂ ಖುಷಿಪಟ್ಟಿದ್ದಾರೆ. ಯಾವುದೇ ಧಾರ್ಮಿಕ ಕೆಲಸದಲ್ಲಿ ಸ್ವಲ್ಪ ಏರುಪೇರಾದರೂ ನಡೆಯುತ್ತೆ ಆದ್ರೆ ಮೃತರ ಆತ್ಮಕ್ಕೆ ಸದ್ಗತಿ ಕೊಡುವ ಬಲಿತರ್ಪಣಂ ಕೆಲಸ ಅದರದ್ದೇ ವಿಧಿವಿಧಾನ, ಸಂಪ್ರದಾಯದಂತೆ ನಡೆಯಲೇ ಬೇಕು.‌ಇದನ್ನ ಅರಿತ ಕೇರಳ ಸಮಾಜಂ ಕೇರಳ ಮೂಲದ ಸಮುದಾಯದವರಿಗಾಗಿ ಇಂದಿನಿಂದ ಪ್ರತೀ ವರ್ಷ ಅಲ್ಲಿನ ಪದ್ದತಿಯ ಅನುಸಾರ ನಡೆಸುವ ಕೆಲಸಕ್ಕೆ ಮುಂದಾಗಿದೆ.

ಒಟ್ಟಾರೆ ಕೇರಳ‌ ಸಮಾಜದವರಿಗೂ ತುಳುನಾಡಿನ ಆಟಿ ಅಮಾವಾಸ್ಯೆಯಂದು ‌ತಮ್ಮ ಸಂಪ್ರದಾಯದಂತೆ ಆಚರಿಸುವ ವ್ಯವಸ್ಥೆ ಉಡುಪಿಯ ಕೇರಳ ಸಮಾಜಂ ಸಂಸ್ಥೆ ಆಯೋಜನೆ‌‌ ಮಾಡಿರುವುದು ನಿಜಕ್ಕೂ ವಿಶೇಷ.