ಬಂಟಕಲ್:“ಬ್ಯಾಂಕಿಂಗ್‌ನಲ್ಲಿ ಉದ್ಯಮ ಪ್ರವೃತ್ತಿ” ಎಂಬ ವಿಷಯದ ಕುರಿತು ಉಪನ್ಯಾಸ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ
ವಿದ್ಯಾಲಯದ ಎಂ ಬಿ ಎ ವಿಭಾಗವು ಪ್ರಥಮ ಮತ್ತು ದ್ವಿತೀಯ
ವರ್ಷದ ವಿದ್ಯಾರ್ಥಿಗಳಿಗಾಗಿ 21 ಜುಲೈ 2025 ರಂದು “ಬ್ಯಾಂಕಿಂಗ್‌ನಲ್ಲಿ ಉದ್ಯಮ ಪ್ರವೃತ್ತಿ” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಎಚ್. ಡಿ. ಎಫ್. ಸಿ ಬ್ಯಾಂಕ್, ಶಿರ್ವ ಶಾಖೆಯ ಮುಖ್ಯಸ್ಥರಾದ ಪ್ರಸಾದ್ ಪ್ರಭು ಇವರು ಭಾಗವಹಿಸಿದ್ದರು.

ಇವರು ಮಾತನಾಡಿ ಬ್ಯಾಂಕ್‌ಗಳು ತಮ್ಮ ಹೆಚ್ಚುವರಿ ಹಣವನ್ನು ಉಳಿಸುವಲ್ಲಿ ವೈವಿಧ್ಯಮಯವಾದ ಪಾತ್ರವನ್ನು ವಹಿಸುತ್ತದೆ. ಬ್ಯಾಂಕ್ ಠೇವಣಿ, ವಿವಿಧ ರೀತಿಯ ಸಾಲಗಳಾದ ವೈಯಕ್ತಿಕ, ಶೈಕ್ಷಣಿಕ, ವಾಹನ, ವಸತಿ ಇತ್ಯಾದಿ ಬ್ಯಾಂಕ್ ವಹಿವಾಟುಗಳು ಮತ್ತು ಬ್ಯಾಂಕ್ ಠೇವಣಿ ಮತ್ತು ಕ್ರೆಡಿಟ್ ಕಾರ್ಡ್ ಬದಲಿಗೆ ಸಾಲಗಳ ಮೂಲಕ ಲಾಭಗಳಿಸುತ್ತದೆ ಎಂಬುದರ
ಬಗ್ಗೆ ಮಾಹಿತಿ ನೀಡಿದರು.

ಬ್ಯಾಂಕ್‌ಗಳು ಠೇವಣಿಯ ಮೇಲೆ 4-6 % ಬಡ್ಡಿ ಮತ್ತು ಸಾಲದ ಮೇಲೆ 9 ರಿಂದ 10% ಬಡ್ಡಿ ಗಳಿಸುತ್ತಾರೆ ಹೀಗಾಗಿ ಬ್ಯಾಂಕ್‌ಗಳು ಲಾಭಗಳಿಸುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಶಾಖೆಗಳು ಬರುತ್ತಿರುವುದರಿಂದ, ಹೊಸ ಗ್ರಾಹಕರನ್ನು ಸಂಪಾದಿಸುವುದು
ಮತ್ತು ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಮತ್ತು ಲಾಭವನ್ನು ಗಳಿಸುವುದು ಬ್ಯಾಂಕುಗಳಿಗೆ ಸವಾಲಾಗಿದೆ ಎಂದರು.
ಹೊಸ ಶಾಖೆ ತೆರೆಯುವುದರಿಂದ ಉದ್ಯೋಗಕ್ಕೆ ಹಲವು
ಅವಕಾಶಗಳಿವೆ ಹಾಗಾಗಿ ವಿದ್ಯಾರ್ಥಿಗಳು ಯೋಚಿಸಿ ಎಚ್. ಡಿ. ಎಫ್. ಸಿ ಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು
ಪ್ರೋತ್ಸಾಹಿಸಿದರು. ಹಣಕಾಸು ಮತ್ತು ಮಾರ್ಕೆಟಿಂಗ್‌ನಲ್ಲಿ ಇರುವ ಖಾಲಿ ಹುದ್ದೆಗಳು ಹಾಗೂ ಅದಕ್ಕೆ ಅಗತ್ಯವಿರುವ ಕೌಶಲ್ಯಗಳು, ಬ್ಯಾಂಕಿಂಗ್ ಪರೀಕ್ಷೆಗಳು ಮತ್ತು ನೋಂದಣಿಗಳು, ತರಬೇತಿ ಇತ್ಯಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ
ಉತ್ತರಿಸಿದರು.