ಇಯರ್ ಫೋನ್ ಅನ್ನು ಬಳಸುವವರ ಸಂಜ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಎಲ್ಲರೂ ಕಿವಿಗೆ ಹೂವಿಟ್ಟುಕೊಂಡವರಂತೆ ಇಯರ್ ಫೋನ್ (ಕಿವಿಬಳ್ಳಿ) ಹಾಕಿಕೊಂಡು ಹೋಗುವವರೇ ಬಿಟ್ಟರೆ, ಇಯರ್ ಫೋನ್ ನಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಎಂದು ಚಿಂತಿಸುವುದಕ್ಕೆ ಯಾರೂ ಹೋಗೋದೇ ಇಲ್ಲ. ಇಲ್ಲಿದೆ ನೋಡಿ ಇಯರ್ ಫೋನ್ ನಮ್ಮ ಆರೋಗ್ಯಕ್ಕೆ ಹೇಗೆಲ್ಲಾ ಕಾಟ ಕೊಡುತ್ತದೆ ಎನ್ನುವ ಮಾಹಿತಿ
ಕಿವಿಗೆ ಹಬ್ಬುತ್ತೆ ಸೋಂಕು:
- ನಮ್ಮ ಇಯರ್ಫೋನ್ ಮತ್ತು ಹೆಡ್ಫೋನ್ಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಹಲವಾರು ಜನ ಬಳಸಿದ ಇಯರ್ಫೋನ್ಗಳನ್ನು ಬಳಸುವುದರಿಂದ ಅವರ ಕಿವಿಗಳಿಂದ ಬರುವ ಬ್ಯಾಕ್ಟೀರಿಯಾಗಳು ಕಿವಿ ಸೋಂಕನ್ನುಂಟುಮಾಡುತ್ತದೆ. ಒಂದು ವೇಳೆ ಇಯರ್ಫೋನ್ಗಳನ್ನು ಯಾರೊಂದಿಗಾದರು ಹಂಚಿಕೊಳ್ಳಲು ತೀರ್ಮಾನಿಸಿದ್ದಲ್ಲಿ, ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಒಳಿತು
ಬಹುತೇಕ ಹೆಡ್ಫೋನ್ಗಳು ನಿಮ್ಮ ಕಿವಿಗಳನ್ನು ಹೆಚ್ಚಿನ ಡೆಸಿಬಲ್ ಧ್ವನಿ ತರಂಗಗಳಿಗೆ ಒಡ್ಡಿಕೊಳ್ಳುವಂತೆ ಮಾಡುವುದರಿಂದ ನಿಮ್ಮ ಕಿವಿಗೆ ಕೆಲವು ಗಂಭೀರ ಹಾನಿಯನ್ನುಂಟುಮಾಡಬಹುದು. ಇಯರ್ಫೋನ್ಗಳನ್ನು ತುಂಬಾ ಹೊತ್ತು ಬಳಸುವುದರಿಂದ ಗಾಳಿಯ ಕಾಲುವೆಯಲ್ಲಿ ಗಾಳಿಯ ಹರಿವನ್ನು ನಿರ್ಬಂಧಿಸಿದಂತಾಗುತ್ತದೆ ಇದರಿಂದ ಶಾಶ್ವತ ಶ್ರವಣ ನಷ್ಟವಾಗಬಹುದು. ಆದ್ದರಿಂದ ಪ್ರತಿ 3೦ ನಿಮಿಷಕ್ಕೆ ಇಯರ್ಫೋನ್ಗಳನ್ನು ತೆಗೆದು ಹಾಕವುದು ಮತ್ತು ಅದರ ಪರಿಮಾಣದ ಮಟ್ಟವನ್ನು ಮಧ್ಯಮ ಮಟ್ಟದಲ್ಲಿಡುವುದು ಸೂಕ್ತ.
- ಇಯರ್ಫೋನ್ನಲ್ಲಿ ಮಿತಿಯಿಲ್ಲದೇ ಸಂಗೀತವನ್ನು ಆಲಿಸುವುದರಿಂದ ಕಿವಿಯ ಮರಗಟ್ಟುವಿಕೆಗೆ ಕಾರಣವಾಗಬಹುದು. ಇದರ ಜೊತೆಗೆ ಶ್ರವಣ ಸಾಮರ್ಥ್ಯವನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳಬಹುದು. ಇಯರ್ ಫೋನ್ ಬಳಕೆ ಅತೀಯಾದರೆ ಅದು ಶಾಶ್ವತ ಶ್ರವಣ ನಷ್ಟಕ್ಕೂ ಕಾರಣವಾಗಬಹುದು.
ಇಯರ್ಫೋನ್ಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಂಗೀತವನ್ನು ಕೇಳುವುದರಿಂದ ಕಿವಿಗಳು ನೋಯುದಲ್ಲದೆ ಪಕ್ಕದ ಭಾಗಗಳಲ್ಲಿಯೂ ತೀವ್ರವಾದ ನೋವುಂಟಾಗುತ್ತದೆ.
ಇಯರ್ಫೋನ್ಗಳು ವಿದ್ಯುತ್ಕಾಂತೀಯ ತರಂಗಗಳನ್ನು ಉತ್ಪತ್ತಿಮಾಡುತ್ತವೆ, ಅದು ದೀರ್ಘಾವಧಿಯಲ್ಲಿ ಮೆದುಳಿಗೆ ತೀವ್ರ ಹಾನಿಯುಂಟುಮಾಡುತ್ತದೆ. ಕಿವಿಯ ಒಳ ಭಾಗವು ಮೆದುಳಿಗೆ ಸಂಪರ್ಕಗೊಂಡಿರುವುದರಿಂದ, ಈ ಭಾಗಕ್ಕೆ ಉಂಟಾಗುವ ಯಾವುದೇ ಹಾನಿ ಮೆದುಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ.
- ವಾಕಿಂಗ್ ಅಥವಾ ಜಾಗಿಂಗ್ ಮಾಡುವಾಗ, ಸ್ಕೂಟಿ ಅಥವಾ ಬೈಕ ಅನ್ನು ಚಲಾಯಿಸುವಾಗ ಇಯರ್ ಪೋನ್/ಹೆಡ್ ಫೋನ್ಗಳನ್ನು ಬಳಸುವ ಜನರು ತಮ್ಮ ಖಾಸಗಿ ಜಗತ್ತಿನಲ್ಲಿ ಮಗ್ನರಾಗಿರುತ್ತಾರೆ, ವಾಹನಗಳ ಹಾಕಿಂಗ್, ರೈಲುಗಳ ಶಬ್ಧಗಳು ಕೇಳಲು ಸಾಧ್ಯವಾಗದ ಕಾರಣ ಆಗ್ಗಾಗೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.
-
ಮಲೇಷಿಯಾದಲ್ಲಿ 16 ವರ್ಷದ ಹುಡುಗ ವೈಯರ್ ಲೆಸ್ ಬ್ಲೂಟುತ್ ಹೆಡ್ಫೋನ್ ಅನ್ನು ಚಾರ್ಜ್ನಲ್ಲಿದ್ದಾಗಲೇ ಬಳಸುತ್ತಿದ್ದ ಕಾರಣ ವಿದ್ಯುತಾಘಾತದಿಂದ ಸಾವನ್ನಪ್ಪಿರುವ ಘಟನೆ ನಮಗೆ ಪಾಠವಾಗಬೇಕು. ಅತಿಯಾದರೆ ಅಮೃತವು ವಿಷ, ಅಗತ್ಯವಿದ್ದಲ್ಲಿ ಮಾತ್ರ ಇಯರ್ಫೋನ್ ಅಥವಾ ಹೆಡ್ಫೋನ್ ಬಳಸಿ, ಬಸ್/ರೈಲ್ ನಲ್ಲಿ ಪ್ರಯಾಣಿಸಬೇಕಾದಾಗ ಸುತ್ತಮುತ್ತಲಿನ ಪರಿಸರವನ್ನು ನೋಡಿ, ಇತರರೊಂದಿಗೆ ಮಾತನಾಡಿ, ವಾಸ್ತವದಲ್ಲಿ ಬರೆಯಿರಿ, ಪುಸ್ತಕ ಓದಿ. ಇಯರ್ ಫೋನ್ ನಿಂದ ಸಾಧ್ಯವಾದಷ್ಟು ದೂರವಿರಿ.