ಮಂಗಳೂರು: ‘ಟೀಮ್ಮೋದಿ’ ವತಿಯಿಂದ ಡಿ.29ರ ಶನಿವಾರ ರಾತ್ರಿ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ವತಿಯಿಂದ ‘ಸಂಪೂರ್ಣ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟವನ್ನು ಮಣ್ಣಗುಡ್ಡೆ ಗುರ್ಜಿ ಸಮೀಪದ ಮೈದಾನದಲ್ಲಿ ಆಯೋಜಿಸಲಾಗಿದೆ.
ಟೀಮ್ ಮೋದಿಯ ಸದಸ್ಯರಾದ ನರೇಶ್ ಶೆಣೈ ವೈಯಕ್ತಿಕ ಖರ್ಚಿನಲ್ಲಿ ಈ ಯಕ್ಷಗಾನವನ್ನು ಆಯೋಜಿಸಿದ್ದು, ಚೌಕಿ ಪೂಜೆ ಮತ್ತು ಅನ್ನ ಸಂತರ್ಪಣೆಯನ್ನು ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.