ಉಡುಪಿ:ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು IEEE ಯುರೇಕಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದಿನಾಂಕ 15 ಡಿಸೆಂಬರ್ 2024 ರಂದು ಪ್ರತಿಷ್ಠಿತ IEEE ಪುಣೆ ವಿಭಾಗವು ಪುಣೆಯ ರಮೀ ಗ್ರ್ಯಾಂಡ್ ಹೋಟೆಲಿನಲ್ಲಿ ಆಯೋಜಿಸಿದ್ದ “IEEE ಯುರೇಕಾ” ಸ್ಪರ್ಧೆಯಲ್ಲಿ
ಬಹುಮಾನವನ್ನು ಪಡೆದಿರುತ್ತಾರೆ.

ಈ ಸ್ಪರ್ಧೆಯಲ್ಲಿ ದಕ್ಷಿಣ ಭಾರತದ ವಿವಿಧ ಕಾಲೇಜುಗಳಿಂದ ಒಟ್ಟು 100ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ಅಂತಿಮ ಸುತ್ತಿಗೆ 15 ತಂಡಗಳು ಆಯ್ಕೆಯಾಗಿದೆ. ಅಂತಿಮ ಸುತ್ತಿಗೆ ಆಯ್ಕೆಯಾದ
ನಮ್ಮ ವಿದ್ಯಾಸಂಸ್ಥೆಯ ತಂಡದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಾಟಾ ಸೈನ್ಸ್ ವಿಭಾಗದ ಪ್ರಥಮ್ ಎಲ್ ಕಾಮತ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೆಶಿನ್ ಲರ್ನಿಂಗ್ ವಿಭಾಗದ ನಂದೀಶ್, ಗಣಕಯಂತ್ರ ವಿಭಾಗದ ನಿಶಿತಾ ಬಿ ರಾವ್ ಮತ್ತು ಕೀರ್ತನಾ ಎಸ್ ಹೆಬ್ಬಾರ್ ಇವರು ಭಾಗವಹಿಸಿ ತೃತೀಯ
ಬಹುಮಾನ ಗಳಿಸಿರುತ್ತಾರೆ.

ವಿದ್ಯಾರ್ಥಿಗಳು ‘ಪರಿಸರದ ಹವಾಮಾನ ಬದಲಾವಣೆ, ಸುಸ್ಥಿರತೆ ಮತ್ತು ನೈಸರ್ಗಿಕ ವಿಕೋಪಗಳ ನಿಭಾವಣೆಗೆ ತಂತ್ರಜ್ಞಾನಗಳು” ಎಂಬ ವಿಷಯದ ಕುರಿತು ಯೋಜನೆಯನ್ನು ಪ್ರಸ್ತುತ ಪಡಿಸಿದರು.

ವಿದ್ಯಾರ್ಥಿಗಳಲ್ಲಿ ಪರಿಸರ ಸಮಸ್ಯೆಗಳು ಮತ್ತು ಸುಸ್ಥಿರ
ತಂತ್ರಜ್ಞಾನಗಳ ಅರಿವು ಮೂಡಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಸಹ ಪಠ್ಯೇತರ ಚಟುವಟಿಕೆಯ ಸಂಯೊಜಕರು ಅಭಿನಂದಿಸಿರುತ್ತಾರೆ.