ಮಂಗಳೂರು: ಮಂಗಳೂರು ವಿಮಾನ ನಿಲ್ದಾಣನದಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಸಿ ಐ ಎಸ್ ಎಫ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
3.89 ಲಕ್ಷ ರೂ. ವಿದೇಶಿ ಕರೆನ್ಸಿಯನ್ನು ರಝಾಕ್ ಖಾಝಿ ಎಂಬಾತನಿಂದ ವಶಪಡಿಸಿಕೊಳ್ಳಲಾಗಿದೆ.
ಈತ ಸ್ಪೆಸ್ ಜೆಟ್ ಮೂಲಕ ದುಬೈಗೆ ತೆರಳಲು ಸಿದ್ದತೆ ನಡೆಸಿದ್ದು, 18 ಸಾವಿರ ದಿರಮ್ಸ್ ಹಾಗೂ 2 ಸಾವಿರ ರಿಯಾಲ್ ವಿದೇಶಿ ಕರೆನ್ಸಿಯನ್ನು ತನ್ನ ಒಳ ಉಡುಪಿನಲ್ಲಿ ಅಡಗಿಸಿಟ್ಟಿದ್ದ ಎಂದು ತಿಳಿದು ಬಂದಿದೆ.