ಸಮುದ್ರದಲ್ಲಿ ರೆಡ್ ಅಲರ್ಟ್ ಘೋಷಣೆ: ಅನುಮಾನಸ್ಪದ ಬೋಟ್ ಕಂಡರೆ ಮಾಹಿತಿ ನೀಡಲು ಸೂಚನೆ

ಮಂಗಳೂರು: ಜಿಲ್ಲಾಡಳಿತದ ನಿರ್ದೇಶನ ಪ್ರಕಾರ ಮೀನುಗಾರಿಕಾ ಇಲಾಖೆ ಉಪನಿರ್ದೇಕ ತಿಪ್ಪೇಸ್ವಾಮಿ ಅವರಿಂದ ಮೀನುಗಾರ ಮುಖಂಡರ ಸಭೆ ನಡೆಸಿದ್ದು,
ಸಮುದ್ರದಲ್ಲಿ ವಿದೇಶಿ ಬೋಟ್, ಅನುಮಾನಸ್ಪದ ಇತರ ಬೋಟ್ ಗಳು ಕಂಡುಬಂದರೆ ತಕ್ಷಣ ಪೋಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ಒದಗಿಸಲು ಸೂಚನೆ ನೀಡಿದ್ದಾರೆ.
ಅಲ್ಲದೇ ಮೀನುಗಾರಿಕೆ ಸಂದರ್ಭ ಬೋಟ್ ಗಳಲ್ಲಿ ಸಂಬಂಧಿಸಿದ ದಾಖಲೆ, ಆಧಾರ್ ಕಾರ್ಡ್ ಪ್ರತಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ.