ಮಂಡ್ಯ: ಕೆಆರ್ಎಸ್ ಜಲಾಶಯದ ಹೊರಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನಪ್ರಿಯ ಪ್ರವಾಸೋದ್ಯಮ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಶನಿವಾರದಿಂದ ಬೋಟಿಂಗ್  ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ.
ಇಲ್ಲಿನ ಕಾವೇರಿ ನದಿ ಹರಿವು ಏರಿಕೆಯಾಗಿದ್ದು, ರಂಗನತಿಟ್ಟುಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಯ ಹಿನ್ನೆಲೆಯಲ್ಲಿ ಬೋಟಿಂಗ್ ಅನ್ನು ನಿಷೇದಿಸಲಾಗಿದೆ.
ಆದರೆ ಅಭಯಾರಣ್ಯಕ್ಕೆ ಭೇಟಿ ನೀಡುವವರಿಗೆ ಯಾವುದೇ ನಿರ್ಬಂಧಗಳಿಲ್ಲವಾದರೂ  ನದಿ ಜಾಗದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.  ಪ್ರವಾಸಿಗರ ಪೈಕಿ ಶೇ. ೮೦ಕ್ಕೆ ಹೆಚ್ಚು ಮಂದಿ ದೋಣಿ ವಿಹಾರ ಮಾಡುತ್ತಾರೆಯಾದ್ದರಿಂದ ಅವರ ಸುರಕ್ಷತೆಯ ದೃಷ್ಟಿಯಿಂದ  ಈ ಕ್ರಮ ಕೈಗೊಳ್ಳಲಾಗಿದೆ.
				 
								 
															





 
															 
															 
															











