ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅಕ್ಯುಪ್ರೆಶರ್ ಮತ್ತು ವಾಟರ್ ಥೆರಪಿ, ಹೀಗೆ ಹಲವು ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಗುರುತಿಸಿ ಹಿರಿಯಡ್ಕ ಅಂಜಾರು ಗ್ರಾಮದ ಡಾ. ವಿಜಯಲಕ್ಷ್ಮಿ ಆರ್ ನಾಯಕ್ ಅವರಿಗೆ ನಾಡಿನ ಸಮಾಚಾರ ಸೇವಾ ಸಂಘ ಗೋಕಾಕ್ ಇವರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇವರು ಕುಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಶನ್ ಕರ್ನಾಟಕ (ರಿ). ಸಂಸ್ಥೆಯ ಶಿಕ್ಷಕಿಯಾಗಿದ್ದು, ಮುಖ್ಯಶಿಕ್ಷಕ ರವಿಕುಮಾರ್ ಉದ್ಯಾವರ, ಸೋಮನಾಥ ಡಿ. ಸುವರ್ಣ ಹಾಗೂ ನಾರಾಯಣ ಆಚಾರ್ಯ ಅವರ ಶಿಷ್ಯೆಯಾಗಿರುತ್ತಾರೆ.
ಡಾಕ್ಟರೇಟ್ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಿಂದ ಸುವರ್ಣಾ ಕರ್ನಾಟಕ ಸಿರಿ, ಕರ್ನಾಟಕ ರತ್ನಶ್ರಿ, ಮಹಿಳಾ ರತ್ನ, ರಾಜ್ಯ, ಕನ್ನಡದ ಕಣ್ಮಣಿ, ಕರ್ನಾಟಕದ ಮುಕುಟ ಮಣಿ, ಪಂಚರತ್ನ, ಡಾ.ರಾಜ್ ಕುಮಾರ್ ಶಿಕ್ಷಣ ರತ್ನ, ಹೀಗೆ ಹಲವಾರು ಪ್ರಶಸ್ತಿ ಯನ್ನು ಪಡೆದಿರುತ್ತಾರೆ.
ಇವರು ಅಂಜಾರು ಗ್ರಾಮದ ಮುಗ್ಗೆರ್ ಜಡ್ಡು ನಿವಾಸಿ ರಾಘವೇಂದ್ರ ನಾಯಕ್ ಅವರ ಧರ್ಮಪತ್ನಿ ಮಾಜಿ ಸೈನಿಕ ಮುತ್ತೂರು ಗಿರೀಶ್ ನಾಯಕ್ ರವರ ಚಿಕ್ಕಮನಾಗಿರುತ್ತಾರೆ. ಇವರ ಇಬ್ಬರು ಪುತ್ರಿಯರು ಕರಾಟೆ ಶಿಕ್ಷಕಿಯಾಗಿದ್ದು, ಪ್ರಸ್ತುತ ಇವರು ಓಂತಿಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾಗಿರುತ್ತಾರೆ.