ಹೆಮ್ಮಾಡಿ: ಫಿಶ್ ಸ್ಟೋರೇಜ್ ನಲ್ಲಿ ಅಮೋನಿಯಾ ಲಿಕ್ವಿಡ್ ಸ್ಪೋಟ ಇಪ್ಪತ್ತಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಹೆಮ್ಮಾಡಿಯ ಬಗ್ವಾಡಿ ಸಮೀಪದ ದೇವಲ್ಕುಂದಲ್ಲಿರುವ ಮಲ್ಪೆ ಮರೈನ್ ಫಿಶ್ ಸ್ಟೋರೇಜ್ ನಲ್ಲಿ ನಡೆದಿದೆ.
ಅಸ್ವಸ್ಥಗೊಂಡವರನ್ನು ಕೂಡಲೇ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲುಗೊಳಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳದಲ್ಲಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ:
ಅಮೋನಿಯಾ ಲಿಕ್ವಿಡ್ ಹತೋಟಿಗೆ ತಂದ ಎರಡು ಅಗ್ನಿಶಾಮಕ ದಳ ಸತತವಾಗಿ ಕಾರ್ಯಾಚಾರಣೆಯಲ್ಲಿ ನಿರತವಾಗಿದೆ.
ಐಸ್ ಫ್ರೀಝ್ ಮಾಡಲು ಬಳಸುವ ಅಮೋನಿಯಾ ಲಿಕ್ವಿಡ್ ಅನ್ನು ಬಳಸಲಾಗುತ್ತದೆ ಸ್ಥಳಕ್ಕೆ ಕಂಡ್ಲೂರು ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀಧರ್ ನಾಯ್ಕ್ ಭೇಟಿ ನೀಡಿದ್ದಾರೆ.