ಉಡುಪಿ: ವಿಪರೀತ ಮಳೆ ಹಾಗೂ ಹಾನಿಯಾಗದಂತೆ ಅನಂತೇಶ್ವರ ಸನ್ನಿಧಿಯಲ್ಲಿ ‘ಚಿತ್ರಾನ್ನ ಸೇವೆ’


ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿರುವ ಅತಿವೃಷ್ಟಿ ಕಡಿಮೆ ಮಾಡುವುದಕ್ಕಾಗಿ ಸಂಪ್ರದಾಯದಂತೆ ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವಾಲಯದಲ್ಲಿ ಚಿತ್ರಾನ್ನ ಸೇವೆ ನಡೆಸಲಾಯಿತು.

ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನಡೆದ ಈ ಸೇವೆಯ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಆಗಮಿಸಿ, ಅನಂತೇಶ್ವರ ದೇವರಿಗೆ ವಿಶೇಷ ಪೂಜೆ ನೆರೆವೇರಿಸಿ, ಪ್ರಾರ್ಥನೆ ಸಲ್ಲಿಸಿದರು.

ನಂತರ ಮಾತನಾಡಿದ ಶ್ರೀಗಳು, ಅತಿವೃಷ್ಟಿಯಿಂದ ನಾನಾ ರೀತಿಯ ಅನಾಹುತಗಳು ನಾಡಿನಾದ್ಯಂತ ಸಂಭವಿಸುತ್ತಿವೆ. ಅವುಗಳನ್ನೆಲ್ಲಾ ಪರಿಹರಿಸಿ, ಜನರಿಗೆ ನೆಮ್ಮದಿಯನ್ನು ನೀಡುವಂತೆ ಅನಂತೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ಭಂಡಾರಿಕೇರಿ ಮಠದ ಶ್ರೀ ವಿದ್ವೇಶ ತೀರ್ಥ ಶ್ರೀಪಾದರು ಮತ್ತಿತರರು ಉಪಸ್ಥಿತರಿದ್ದರು.