ರಾಷ್ಟ್ರ ಮಟ್ಟದ ಜೆ.ಇ.ಇ ಮೈನ್ ನಲ್ಲಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಅಭಯ್‍ ಕಾಮತ್

ಕಾರ್ಕಳ: ರಾಷ್ಟ್ರ ಮಟ್ಟದಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆ.ಇ.ಇ ಮೈನ್‍ ಏಪ್ರಿಲ್ 2021ರ ತೃತೀಯ ಹಂತದ ಪರೀಕ್ಷೆಯಲ್ಲಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು  ಸಾಧನೆ ಮಾಡಿದ್ದಾರೆ.

ಅಭಯ್‍ ಕಾಮತ್ ಭೌತಶಾಸ್ತ್ರದಲ್ಲಿ 100ಕ್ಕೆ 100 ಪರ್ಸೆಟೈಲ್ ನೊಂದಿಗೆ 99.95 ಪರ್ಸೆಂಟೈಲ್ ಹಾಗೂ ಮನ್ವಿತ್ ಪ್ರಭು ಭೌತಶಾಸ್ತ್ರದಲ್ಲಿ 100ಕ್ಕೆ 100 ಪರ್ಸೆಟೈಲ್‍ನೊಂದಿಗೆ ಶೇ. 99.49

ಈವರೆಗೆ ನಡೆದ ಮೂರು ಹಂತದ ಜೆ.ಇ.ಇ. ಮೈನ್‍ ಪರೀಕ್ಷೆಯಲ್ಲಿ ಒಟ್ಟಾರೆ 99ಕ್ಕಿಂತ ಅಧಿಕ ಪರ್ಸೆಂಟೈಲ್ 3 ವಿದ್ಯಾರ್ಥಿಗಳಿಗೆ, 98ಕ್ಕಿಂತ ಅಧಿಕ ಪರ್ಸೆಂಟೈಲ್ 9 ವಿದ್ಯಾರ್ಥಿಗಳಿಗೆ,95ಕ್ಕಿಂತ ಅಧಿಕ ಪರ್ಸೆಟೈಲ್ 35 ವಿದ್ಯಾರ್ಥಿಗಳಿಗೆ ಬಂದಿದ್ದು, ಒಟ್ಟು59 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸಿ ಸಾಧನೆ ಮಾಡಿದ್ದಾರೆ.

ಈ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಪರ್ಸೆಂಟೈಲ್ ಗಳಿಸಿದ ವಿದ್ಯಾರ್ಥಿಗಳು ಎನ್.ಐ.ಟಿ.ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರು ಪದ್ಮಗೋಪಾಲ್‍ ಎಜ್ಯುಕೇಶನ್‍ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರು ಶುಭಹಾರೈಸಿ ಅಭಿನಂದಿಸಿದ್ದಾರೆ.