ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಹಯೋಗದೊಂದಿಗೆ 5ನೇ ಆವೃತ್ತಿಯ ಮಣಿಪಾಲ್ ಮ್ಯಾರಥಾನ್ ಫೆಬ್ರವರಿ 13 ರಂದು ನಡೆಯಲಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹೆಯ ಸಹ ಕುಲಪತಿ ಡಾ. ಹೆಚ್ ಎಸ್ ಬಲ್ಲಾಳ್ ಈ ಕುರಿತು ಮಾಹಿತಿ ನೀಡಿದರು.
ಓಟವು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸಲು ಅತ್ಯುತ್ತಮ ವಿಧಾನವಾಗಿದೆ. ಇದು ನಿಮ್ಮ ಆರೋಗ್ಯದ ಪ್ರತಿಯೊಂದು ಭಾಗಕ್ಕೂ ಪ್ರಯೋಜನವನ್ನು ನೀಡುತ್ತದೆ, ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿ ಮತ್ತು ಆನಂದವನ್ನು ಹೆಚ್ಚಿಸುತ್ತದೆ. ಎಲ್ಲಾ ಕೋವಿಡ್ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು 2022 ರಲ್ಲಿ ನಮ್ಮ ಪರಂಪರೆಯ ಮಣಿಪಾಲ್ ಮ್ಯಾರಥಾನ್ ಅನ್ನು ಮರಳಿ ತರಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಪ್ರಧಾನಿ ಮೋದಿಯವರು ನೀಡಿದ ‘ಫಿಟ್ ಇಂಡಿಯಾ’ ಕರೆಗೆ ಬೆಂಬಲಿಸುವ ಸಲುವಾಗಿ ಈ ಮ್ಯಾರಥಾನ್ ಆಯೋಜಿಸಲಾಗಿದೆ. ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು ಕನಿಷ್ಠ ಅರ್ಧ ಘಂಟೆಯಾದರೂ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ದಶಕಗಳಿಂದ ಮಣಿಪಾಲ ಮ್ಯಾರಥಾನ್ನ ಭಾಗವಾಗಿದೆ ಮತ್ತು ನಾವು 2022 ನೊಂದಿಗೆ ಈ ಪ್ರಯಾಣವನ್ನು ಮುಂದುವರಿಸುತ್ತಿದ್ದೇವೆ. ಜಿಲ್ಲೆಯ ಜನರು ಈ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸುತ್ತೇನೆ ಎಂದರು.
ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್, ಓಟವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಹೊಸ ಜನರನ್ನು ಭೇಟಿ ಮಾಡಲು ಮತ್ತು ಬಲವಾದ ಸಂಬಂಧಗಳನ್ನು ರೂಪಿಸಲು ನಿಮಗೆ ಸಹಾಯ ಮಾಡುವ ದೈಹಿಕ ವ್ಯಾಯಾಮವಾಗಿದೆ. ಗುರಿಗಳನ್ನು ರೂಪಿಸಲು ಮತ್ತು ಸಾಧಿಸಲು ಓಟವು ಉತ್ತಮ ವಿಧಾನವಾಗಿದೆ. ನಿಮ್ಮ ಜೀವನದ ಗುರಿಯನ್ನು ರೂಪಿಸಬೇಕೆಂದರೆ, ನಿಮ್ಮ ಬೂಟುಗಳನ್ನು ಹಾಕಿಕೊಂಡು ಕೆಲಸಕ್ಕೆ ಹೋಗುವ ಸಮಯ ಬಂದಿದೆ ಎಂದರು. ಫೆಬ್ರವರಿ ೨೦೨೨ ಕ್ಕೆ ನಿಗದಿಯಾಗಿರುವ ಮಣಿಪಾಲ ಮ್ಯಾರಥಾನ್ ನ ೫ ನೇ ಆವೃತ್ತಿಯನ್ನು ಘೋಷಿಸಲು ನಮಗೆ ಸಂತೋಷವಾಗಿದೆ. ನಾವು ಒಂಊಇ ಯಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ, ಕೋವಿಡ್ ನ ರ್ಕಾರದ ಮರ್ಗಸೂಚಿಗಳನ್ನು ಅನುಸರಿಸುತ್ತ, ಈ ಕರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಯತ್ನಿಸುತ್ತೇವೆ ಎಂದರು”
ಎಸ್ ಪಿ ಕರ್, ನಿರ್ದೇಶಕರು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗ ಡಾ. ವಿನೋದ್ ನಾಯಕ್, ಕಾರ್ಯದರ್ಶಿ, ಕ್ರೀಡಾ ಪರಿಷತ್ತ, ಇವರುಗಳ ಉಪಸ್ಥಿತಿಯಲ್ಲಿ ಘೋಷಣೆ ಮಾಡಲಾಯಿತು.
ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್ ಪಿ ಕರ್, ಕ್ರೀಡಾ ಪರಿಷತ್ತಿನ ಕಾರ್ಯದರ್ಶಿ ಡಾ ವಿನೋದ್ ನಾಯಕ್, ಪ್ರಕಾಶ್ ಚಂದ್ರ, ಡಾ ಶೋಭಾ ಈರಪ್ಪ ಇದ್ದರು.