ಫೆ.4 ರಿಂದ 11 ರವರೆಗೆ ಮುಂಡ್ಕಿನಜೆಡ್ಡು ಗೋಪಾಲಕೃಷ್ಣ ಮಂದಿರದಲ್ಲಿ 48 ನೇ ವಾರ್ಷಿಕ ಭಜನಾ ಮಂಗಲೋತ್ಸವ

ಚೇರ್ಕಾಡಿ: ರಾಮಜನ್ಮಭೂಮಿ ಪುಣ್ಯಭೂಮಿ ಅಯೋಧ್ಯೆಯಲ್ಲಿ ಜ.22 ರಂದು ಜರುಗಿದ ಶ್ರೀ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಸುಂದರ ಕ್ಷಣದ ಪ್ರಯುಕ್ತ, ಮುಂಡ್ಕಿನಜೆಡ್ಡಿನ ಶ್ರೀ ಗೋಪಾಲಕೃಷ್ಣ ಮಂದಿರದಲ್ಲಿ ಫೆ.4 ರಿಂದ 11 ರವರೆಗೆ 48 ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಫೆ.4 ರಂದು ಸಂಜೆ 5 ಗಂಟೆಯಿಂದ ಗದಾಯುದ್ದ ಭಾಗವತಿಕೆ ಜರುಗಲಿರುವುದು ಎಂದು ದೇವಳದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.