ಕಾರ್ಕಳ: ಪಳ್ಳಿಯಲ್ಲಿ ಇಸ್ಪೀಟ್ ಜುಗಾರಿ ಅಡ್ಡೆಗೆ ಪೊಲೀಸರ ದಾಳಿ – ಮೂವರ ಬಂಧನ

ಕಾರ್ಕಳ: ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಜುಗಾರಿ ಆಟದಲ್ಲಿ ನಿರತರಾಗಿದ್ದ ಮೂವರನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ನಗರ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಸಂದೀಪ್‌ ಕುಮಾರ್‌ ಶೆಟ್ಟಿಯವರು ಪಳ್ಳಿ ಶಾಲಾ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣ ಪಣವಾಗಿಟ್ಟು ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿಯನ್ನು ನಡೆಸಿದ್ದರು. ಲೋಕೇಶ್‌, ವೇಲು ಮುರುಗನ್ ಮತ್ತು ರಂಗನಾಥ್‌ ಎಂಬವರನ್ನು ವಶಕ್ಕೆ ಪಡೆದಿದ್ದು, ಅವರಿಂದ ಆಟಕ್ಕೆ ಬಳಸುತ್ತಿದ್ದ 5,500 ರೂ. ನಗದು, […]

ಪೂನಂ ಪಾಂಡೆ ಸಾವಿನ ಸುತ್ತ ಊಹಾಪೋಹ: ಸಂಪರ್ಕಕ್ಕೆ ಸಿಗುತ್ತಿಲ್ಲ ಕುಟುಂಬ ಸದಸ್ಯರು; ಜೀವಂತವಾಗಿದ್ದಾಳೆ ಎನ್ನುವ ಪೋಸ್ಟ್ ಹಂಚಿಕೆ!!

ರೂಪದರ್ಶಿ, ನಟಿ ಮತ್ತು ರಿಯಾಲಿಟಿ ಟಿವಿ ತಾರೆ ಪೂನಂ ಪಾಂಡೆ ಗುರುವಾರ ರಾತ್ರಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಶುಕ್ರವಾರ ಹೇಳಿದ್ದರು. ಆಕೆಯ ಸಾವಿನ ಸುದ್ದಿಯನ್ನು ಆಕೆಯ ತಂಡವು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿತ್ತು. ಆದರೆ, ಪೂನಂ ಜೀವಂತವಾಗಿದ್ದಾರೆ ಎನ್ನುವ ರೀತಿಯ ಪೋಸ್ಟ್ ಗಳು ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿವೆ. ಪೂನಂ ಅವರ ‘ಅನಿರೀಕ್ಷಿತ’ ಸಾವಿಗೆ ಹಲವಾರು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದರೆ, ಆಕೆಯ ಸಾವಿನ ಕಾರಣದ ಬಗ್ಗೆ ಊಹಾಪೋಹಗಳು […]

ಮಣಿಪಾಲ್ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶ

ಮಣಿಪಾಲ ಗ್ರೀನ್ ಟೆಕ್ ನಲ್ಲಿ ಉದ್ಯೋಗಾವಕಾಶಗಳಿದ್ದು ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಹೀಟ್ ಪಂಪ್ ತಯಾರಿಕೆ ಮತ್ತು ಸ್ಥಾಪನೆಗೆ- 2HVAC ಇಂಜಿನಿಯರ್ ಗಳು-2ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ಬೋರ್ಡ್ ವೈರಿಂಗ್ ಮತ್ತು ಡಿಸ್ಸೈನಿಂಗ್ ತಿಳಿದಿರುವವರು-2ಶೀಟ್ ಮೆಟಲ್ ತಯಾರಿಕೆ ಮತ್ತು ಮಶೀನ್ ವಿನ್ಯಾಸ ತಿಳಿದಿರುವವರು-2ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳು-2 ಆಸಕ್ತರು ಸಿವಿ ಅನ್ನು hellomanipalgreentech@gmail.comಗೆ ಕಳುಹಿಸಬಹುದು. ಸಂಪರ್ಕ: 9481283130/7829119988

ಚುನಾವಣಾ ‘ಗ್ಯಾರಂಟಿ’, ‘ಭಾಗ್ಯ’ಗಳ ಆಮಿಷಕ್ಕೆ ವಿರಾಮ ಕೋರಿ ಅರ್ಜಿ ಸಲ್ಲಿಕೆ: ನೋಟಿಸ್ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಚುನಾವಣೆ ವೇಳೆ ಮತದಾರರಿಗೆ ‘ಗ್ಯಾರಂಟಿ’, ‘ಭಾಗ್ಯ’ಗಳ ಆಮಿಷವೊಡ್ಡಿ ಮತ ಪಡೆಯುವ ರಾಜಕೀಯ ಪಕ್ಷಗಳ ಮಾದರಿಗೆ ಕರ್ನಾಟಕ ರಾಜ್ಯ ಅವಕಾಶ ಮಾಡಿಕೊಟ್ಟಿದ್ದು, ಇಂತಹ ನಡೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂಬ ಮನವಿಗೆ ಹೈಕೋರ್ಟ್‌ ಸ್ಪಂದಿಸಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ‘ಗ್ಯಾರಂಟಿ’ ರೂಪದಲ್ಲಿ ಆಮಿಷ ನೀಡಲಾಗಿದ್ದು, ಅಂತಹ ಅಕ್ರಮಗಳನ್ನು ತಡೆಯುವಂತೆ ಆಯಾ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ […]

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯ ಗೌರವ: ಪ್ರಧಾನಿ ಮೋದಿ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (L K Advani) ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ (Bharat Ratna) ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಡ್ವಾಣಿ ಅವರೊಂದಿಗೆ ಮಾತನಾಡಿ ಈ ಸುದ್ದಿಯನ್ನು ತಿಳಿಸಿದ್ದಾರೆ. “ಶ್ರೀ ಎಲ್‌ಕೆ ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ” ಎಂದು […]