ಮುಂಡ್ಕಿನಜೆಡ್ಡು: ಫೆ.19 ರಿಂದ 26 ರವರೆಗೆ 47 ನೇ ವರ್ಷದ ಭಜನಾ ಸಪ್ತಾಹ

ಚೇರ್ಕಾಡಿ: ಇಲ್ಲಿನ ಮುಂಡ್ಕಿನಜೆಡ್ಡು ಶ್ರೀಗೋಪಾಲಕೃಷ್ಣ ಮಂದಿರದಲ್ಲಿ 47 ನೇ ವರ್ಷದ ಭಜನಾ ಸಪ್ತಾಹವು ಫೆ.19 ರಿಂದ 26 ರವರೆಗೆ ನಡೆಯಲಿದ್ದು, ಹಲವು ಭಜನಾ ಮಂಡಳಿಗಳು ಇದರಲ್ಲಿ ಭಾಗವಹಿಸಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯು ತಿಳಿಸಿದೆ.