ಪಕ್ಷದ ಹಿರಿಯರು ಅವಕಾಶ ನೀಡಿದರೆ ಜನಸೇವೆಗೆ ಸಿದ್ದ: ವಿಜಯ್ ಕೊಡವೂರು

ಉಡುಪಿ: ನಾನು ಟಿಕೆಟ್ ಆಕಾಂಕ್ಷಿಯಲ್ಲ, ಆದರೆ ಪಕ್ಷದ ಹಿರಿಯರು ಅಪೇಕ್ಷೆ ಪಟ್ಟರೆ ಜನಸೇವೆಗೆ ಸಿದ್ದ ಎಂದು ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದರು. ಕೊಡವೂರು ವಾರ್ಡಿನಲ್ಲಿ ಕಳೆದ ಎರಡೂ ಕಾಲು ವರ್ಷದಿಂದ ಮಾಡಿದ ಅಭಿವೃದ್ದಿ ಕೆಲಸಗಳ ಮಾಹಿತಿಯನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಕೊಡವೂರು ವಾರ್ಡಿನ ಶಕ್ತಿ, ಸವಾಲು ಮತ್ತು ಅಪೇಕ್ಷೆಗಳ ಬಗ್ಗೆ ತಿಳಿಯಲು ಸರ್ವೇ ನಡೆಸಿ ಬಳಿಕ ಆ ಸರ್ವೆಯ ಮಾಹಿತಿಯನ್ನಾಧರಿಸಿ 17 ಸಮಿತಿಗಳನ್ನು ರಚನೆ ಮಾಡಿ, ದಿವ್ಯಾಂಗರು, ಕೃಷಿಕರು, ನಿರುದ್ಯೋಗಿಗಳು, ವಿದ್ಯಾರ್ಥಿಗಳು, […]

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ರಿಷಬ್ ಶೆಟ್ಟಿ ಆಯ್ಕೆ

  ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2023- ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಆಯ್ಕೆಯಾಗಿದ್ದಾರೆ. ರಿಷಬ್ ಅವರು ಫೆ.20ರಂದು ಮುಂಬೈನ ತಾಜ್ ಲ್ಯಾಂಡ್ ಎಂಡ್ ಹೋಟೆಲ್‌ನಲ್ಲಿ ಪ್ರಶಸ್ತಿ ಯನ್ನು ಸ್ವೀಕರಿಸಲಿದ್ದಾರೆ.  

ಮುಂಡ್ಕಿನಜೆಡ್ಡು: ಫೆ.19 ರಿಂದ 26 ರವರೆಗೆ 47 ನೇ ವರ್ಷದ ಭಜನಾ ಸಪ್ತಾಹ

ಚೇರ್ಕಾಡಿ: ಇಲ್ಲಿನ ಮುಂಡ್ಕಿನಜೆಡ್ಡು ಶ್ರೀಗೋಪಾಲಕೃಷ್ಣ ಮಂದಿರದಲ್ಲಿ 47 ನೇ ವರ್ಷದ ಭಜನಾ ಸಪ್ತಾಹವು ಫೆ.19 ರಿಂದ 26 ರವರೆಗೆ ನಡೆಯಲಿದ್ದು, ಹಲವು ಭಜನಾ ಮಂಡಳಿಗಳು ಇದರಲ್ಲಿ ಭಾಗವಹಿಸಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯು ತಿಳಿಸಿದೆ.

ಬೆಳ್ಮಣ್: ಫೆಬ್ರವರಿ 20 ರಂದು ಕಾರ್ಕಳ ತಹಶೀಲ್ದಾರರ ಗ್ರಾಮ ವಾಸ್ತವ್ಯ

ಬೆಳ್ಮಣ್: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಕಾರ್ಕಳ ತಹಶೀಲ್ದಾರರು ಕಂದಾಯ ಅಧಿಕಾರಿಗಳೊಂದಿಗೆ ಫೆಬ್ರವರಿ 20 ರಂದು ಬೆಳಗ್ಗೆ 10.30 ಕ್ಕೆ ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂಡ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಸೂಡ ಗ್ರಾಮದ ಗ್ರಾಮಸ್ಥರು ಕಂದಾಯ, ಪಂಚಾಯತ್ ರಾಜ್, ಆಹಾರ, ಸರ್ವೇ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಅಹವಾಲುಗಳಿದ್ದಲ್ಲಿ ಅದನ್ನು ನೀಡಿ, ಪರಿಹಾರ ಕಂಡುಕೊಳ್ಳಬಹುದಾಗಿದೆ ಹಾಗೂ ಸದ್ರಿ ಇಲಾಖೆಗಳಡಿ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳ ಮಾಹಿತಿಯನ್ನು […]

ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರ ಬಂಧನ; ಮುಖ್ಯ ಆರೋಪಿಗಾಗಿ ಶೋಧ

ಉಡುಪಿ: ಫೆ. 5 ರಂದು ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚೀಂದ್ರ ತಿಳಿಸಿದ್ದಾರೆ. ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆಬ್ರವರಿ 5 ರಂದು ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಿ ನಾಲ್ವರು ವ್ಯಕ್ತಿಗಳು ಶರತ್ ಶೆಟ್ಟಿಯನ್ನು ಕೊಲೆ ಮಾಡಿದ್ದರು. ಆದರೆ ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಆದರೆ ನಮ್ಮ ತಂಡಗಳ ಪರಿಣತಿಯಿಂದ ನಾವು ಈ ಪ್ರಕರಣವನ್ನು ಭೇದಿಸಿದ್ದೇವೆ ಮತ್ತು ನಾಲ್ವರನ್ನು ಬಂಧಿಸಿ, […]