udupixpress
Home Trending ದ.ಕ.‌ಜಿಲ್ಲೆ: ಬರೋಬ್ಬರಿ 448 ಮಂದಿಗೆ ಕೊರೋನಾ ಪಾಸಿಟಿವ್; 6 ಮಂದಿ ಬಲಿ

ದ.ಕ.‌ಜಿಲ್ಲೆ: ಬರೋಬ್ಬರಿ 448 ಮಂದಿಗೆ ಕೊರೋನಾ ಪಾಸಿಟಿವ್; 6 ಮಂದಿ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಇಂದು ಬರೋಬ್ಬರಿ 448 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 6 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 343ಕ್ಕೆ ಏರಿಕೆಯಾಗಿದೆ.
ಇಂದು ಮಂಗಳೂರಿನ 273, ಬಂಟ್ವಾಳದ 103, ಪುತ್ತೂರಿನ 27, ಬೆಳ್ತಂಗಡಿಯ 18, ಸುಳ್ಯದ 17 ಹಾಗೂ ಹೊರ ಜಿಲ್ಲೆಯ 10 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಸಂಪರ್ಕವೇ ಪತ್ತೆಯಾಗದ 215, ILI ಪ್ರಕರಣದಿಂದ 149, ಪ್ರಾಥಮಿಕ ಸಂಪರ್ಕದಿಂದ 66, SARI ಪ್ರಕರಣದಿಂದ 17,
ವಿದೇಶದಿಂದ ಬಂದ ಒಬ್ಬರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇಂದು ಜಿಲ್ಲೆಯಲ್ಲಿ 293 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 11,837 ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಒಟ್ಟು 2,521 ಆಕ್ವೀವ್ ಕೇಸ್ ಗಳಿವೆ.

error: Content is protected !!