ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿ ಭಾರತೀಯ ಮೂಲದ ನಾಲ್ವರ ಅಪಹರಣ

ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಸೋಮವಾರ (ಸ್ಥಳೀಯ ಕಾಲಮಾನ) ಭಾರತೀಯ ಮೂಲದ ಪರಿವಾರವೊಂದು ಅಪಹರಣಗೊಂಡಿರುವುದಾಗಿ ವರದಿಯಾಗಿದೆ. ಅಪಹರಣಗೊಂಡ ನಾಲ್ವರಲ್ಲಿ 8 ತಿಂಗಳ ಹೆಣ್ಣು ಮಗು ಮತ್ತು ಆಕೆಯ ಪೋಷಕರು ಸೇರಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

36 ವರ್ಷದ ಜಸ್ದೀಪ್ ಸಿಂಗ್, 27 ವರ್ಷದ ಜಸ್ಲೀನ್ ಕೌರ್ ಮತ್ತು ಅವರ ಎಂಟು ತಿಂಗಳ ಮಗು ಅರೂಹಿ ಧೇರಿ ಮತ್ತು 39 ವರ್ಷದ ಅಮನದೀಪ್ ಸಿಂಗ್ ಅವರನ್ನು ಕರೆದೊಯ್ಯಲಾಗಿದೆ ಎಂದು ಮರ್ಸಿಡ್ ಕೌಂಟಿ ಶೆರಿಫ್ ಕಚೇರಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಎಬಿಸಿ10 ವರದಿ ಮಾಡಿದೆ.

ಶಂಕಿತನ ಅಪಹರಣಕಾರ ಶಸ್ತ್ರಸಜ್ಜಿತನಾಗಿದ್ದ ಮತ್ತು ಆತ ಅಪಾಯಕಾರಿ ಎಂದು ಪೊಲೀಸರು ವಿವರಿಸಿದ್ದಾರೆ. ತನಿಖೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ ಆದರೆ ನಾಲ್ವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿದ್ದ ರಸ್ತೆ ಮಾರ್ಗದಿಂದ ಅಪಹರಣ ನಡೆದಿದೆ ಎನ್ನಲಾಗಿದೆ.