ಉಡುಪಿ: ಇಲ್ಲಿನ ಬೀಡಿನಗುಡ್ಡೆಯಲ್ಲಿ ನಡೆದ ಎರಡನೇ ವರ್ಷದ ಸಮ್ಮಿಲನ ಟ್ರೋಫಿ, 2024 ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯ ಆರು ಜನ ಅನಾರೋಗ್ಯ ಪೀಡಿತರಾದ ರಾಜೇಶ್, ಗಿರಿಜಾ, ಸೃಷ್ಟಿ, ಕೃಷ್ಣಪ್ಪ, ಅಜಿತ್ ಅವಿನಾಶ್ ನಾಯಕ್ ಇವರಿಗೆ ಆರ್ಥಿಕ ಸಹಾಯ ನೀಡಿ ಸಹಕರಿಸಲಾಯಿತು.
ಸಮ್ಮಿಲನ ಟ್ರೋಫಿ ಉದ್ಘಾಟನೆಯಲ್ಲಿ ಬಿ.ವಿದ್ಯಾಧರ ಶೆಟ್ಟಿ, ಉಪ ಪ್ರಾದೇಶಿಕ ವ್ಯವಸ್ಥಾಪಕ ಬ್ಯಾಂಕ್ ಆಫ್ ಬರೋಡ, ದೀಪರಾಜ್ ಹೆಗ್ಡೆ ಡೆಪ್ಯುಟಿ ಮ್ಯಾನೇಜರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ರಾಜೇಶ್ ಬಳ್ಳಾಲ್ ಭಾಗವಹಿಸಿದ್ದರು.
ಕಸ್ತೂರ್ಬಾ ಮಣಿಪಾಲ ಪ್ರಥಮ ಹಾಗೂ ಯುನೈಟೆಡ್ ಟೊಯೋಟಾ ದ್ವಿತೀಯ ಸ್ಥಾನಿಯಾಗಿ ಗೆದ್ದು ಟ್ರೋಫಿಯನ್ನು ಮುಡಿಗೇರಿಸಿತು.
ಸಮಾರೋಪ ಸಮಾರಂಭದಲ್ಲಿ ಶಾಸಕ ಯಶ್ ಪಾಲ್ ಎ. ಸುವರ್ಣ, ನಗರಸಭೆ ಸದಸ್ಯ ಡಿ. ಬಾಲಕೃಷ್ಣ ಶೆಟ್ಟಿ, ಉದ್ಯಮಿ ಅನಿಲ್ ಶೆಟ್ಟಿ, ಕಾಜರಗುತ್ತು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕ್ರಿಕೆಟ್ ಪಂದ್ಯಾಟದಲ್ಲಿ ಸಹಾಯಾರ್ಥವಾಗಿ ನಡೆದ ಲಕ್ಕಿಡಿಪ್ ಡ್ರಾ ವಿಜೇತರು: ರಂಜಿತ್ ಹೆಜಮಾಡಿ, (ನಂ 2041 2), ಚೇತನ್ ಅರಸಿನಮಕ್ಕಿ (ನಂ. 465 ).