ಮಂಗಳೂರು ಸಂಪುಟ ಸಭೆಯಲ್ಲಿ ಘೋಷಿಸಿದ ಅನುದಾನ ಉಡುಪಿಗೆ ಇನ್ನೂ ಬಂದಿಲ್ಲ: ವಿವೇಕಾನಂದ ಸಾಲಿನ್ಸ್ ಆಕ್ರೋಶ

ಉಡುಪಿ: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ದೊರೆತಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ವಿವೇಕಾನಂದ ಸಾಲಿನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇಲ್ಲವಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲು ಹಲವು ಇಲಾಖೆಗಳ ಕ್ಲಿಯರೆನ್ಸ್ ಪಡೆಯಬೇಕಿದ್ದು, ಇದಕ್ಕಾಗಿ ತಿಂಗಳುಗಟ್ಟಲೆ ಸರಕಾರಿ ಕಚೇರಿಗಳಿಗೆ […]
ಮನೆ ಕೆಲಸಕ್ಕೆ ಜನ ಬೇಕಾಗಿದ್ದಾರೆ

ಉಡುಪಿಯಲ್ಲಿ ಮನೆ ಕೆಲಸ ಮಾಡಲು ಆಸಕ್ತಿ ಇರುವವರು ಬೇಕಾಗಿದ್ದಾರೆ. ಸ್ಥಳ: ಉಡುಪಿ ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ: 9380323108 ಆಸಕ್ತರು ತಕ್ಷಣ ಸಂಪರ್ಕಿಸಿ
ನವೆಂಬರ್-ಡಿಸೆಂಬರ್ ದೇಶದೆಲ್ಲೆಡೆ ಮದುವೆಗಳದ್ದೇ ಅಬ್ಬರ: 25 ದಿನಗಳಲ್ಲಿ 52 ಲಕ್ಷ ಮದುವೆ; ₹7.5 ಲಕ್ಷ ಕೋಟಿ ವಹಿವಾಟಿನ ನಿರೀಕ್ಷೆ

ನವದೆಹಲಿ: ದೇಶಾದ್ಯಂತ ನವೆಂಬರ್ 21ರಿಂದ ಡಿಸೆಂಬರ್ 15ರವರೆಗೆ ಅಂದಾಜು 52 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ಈ ಮೂಲಕ ಸುಮಾರು ₹7.5 ಲಕ್ಷ ಕೋಟಿ ವಹಿವಾಟು ನಡೆಯಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (CAIT) ತಿಳಿಸಿದೆ. ಈ 25 ದಿನಗಳ ಮದುವೆ ಋತುವಿನಲ್ಲಿ ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಅಧಿಕ ಮದುವೆಗಳು ನಡೆಯುವ ಅಂದಾಜಿದೆ. ಇದರಿಂದ ಚಿಲ್ಲರೆ ವ್ಯಾಪಾರ, ಉತ್ಪಾದನೆ, ಆತಿಥ್ಯ, ಸಾರಿಗೆ, ಆಹಾರ, ಆಭರಣ ಸೇರಿದಂತೆ ವಿವಿಧ ವಲಯಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ. ದೆಹಲಿ-ಎನ್ಸಿಆರ್ ಪ್ರದೇಶವೊಂದರಲ್ಲೇ […]
ಪ್ರಬೋಧಿನೀ ಏಕಾದಶಿ: ಕೃಷ್ಣ ಮಠದಲ್ಲಿ ಸುದರ್ಶನ ಹೋಮ

ಉಡುಪಿ: ಪ್ರಬೋಧಿನೀ ಏಕಾದಶಿ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶುಕ್ರವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಅಂಗವಾಗಿ ಸುದರ್ಶನ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಪರ್ಯಾಯ ಪೀಠಾಧೀಶರಾದ ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸುದರ್ಶನ ಹೋಮದಲ್ಲಿ ಭಾಗವಹಿಸಿ, ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.