ಉಡುಪಿಯ ಪೃಥ್ವಿ ಏಜೆನ್ಸಿಸ್ ನಲ್ಲಿದೆ ದೀಪಾವಳಿಗೆ ಸ್ಪೆಷಲ್ ರಿಯಾಯಿತಿ ಆಫರ್

ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ಪೃಥ್ವಿ ಏಜೆನ್ಸಿಸ್‌ನಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳ ಮಾರಾಟದಪ್ರಯುಕ್ತ ಫರ್ನಿಚರ್ ಹಾಗೂ ಅಪ್ಲೆಯನ್ಸಸ್, ಗೃಹ ಬಳಕೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಮಾರಾಟ ಆಯೋಜಿಸಿದೆ. 3 ಸೀಟರ್ ಸೋಫಾ 4,999 ರೂ., ಬೆಡ್‌ರೂಮ್ ಸೆಟ್ 34,500 ರೂ., ಕಂಪ್ಯೂಟರ್ ಚೆಯರ್ 2,500 ರೂ., ಡೈನಿಂಗ್ ಟೇಬಲ್ 9,999 ರೂ., ಕ್ಲಾತ್ ಹ್ಯಾಂಗರ್ 1,500 ರೂ., ಫೋಲ್ಡಿಂಗ್ ಟೇಬಲ್ 2,000 ರೂ., ಕಂಪ್ಯೂಟರ್ ಟ್ರಾಲಿ 1,999 ರೂ., ವಿಶೇಷ ದರದಲ್ಲಿ ಲಭ್ಯವಿದೆ.ಹೋಮ್ ಎಪ್ಲೈಯನ್ಸಸ್ಸಿಂಗಲ್ ಡೋರ್ ರೆಫ್ರಿಜರೇಟರ್ 11,990 […]

ಕೃಷ್ಣಮಠದಲ್ಲಿ ಸಂಭ್ರಮದ ದೀಪಾವಳಿ ಎಣ್ಣೆ ಶಾಸ್ತ್ರ, ತೈಲಾಭ್ಯಂಜನ

ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ ಶ್ರೀಕೃಷ್ಣಮಠದಲ್ಲಿ ಸಾಂಪ್ರದಾಯಿಕವಾಗಿ ಎಣ್ಣೆ ಶಾಸ್ತ್ರ ಹಾಗೂ ತೈಲಾಭ್ಯಂಜನ ಕಾರ್ಯಕ್ರಮ ನಡೆಯಿತು. ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥರು ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರು ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರ ಸಮ್ಮುಖದಲ್ಲಿ ಚಂದ್ರಶಾಲೆಯಲ್ಲಿ ಎಣ್ಣೆ ಶಾಸ್ತ್ರ ನೆರವೇರಿಸಿದರು. ಈ ಸಂದರ್ಭದಲ್ಲಿ ಯತಿಗಳು ಪರಸ್ಪರ ಎಣ್ಣೆ ಶಾಸ್ತ್ರ ನೆರವೇರಿಸಿಕೊಂಡ ಬಳಿಕ ಭಕ್ತಾದಿಗಳಿಗೂ ಎಣ್ಣೆ ಶಾಸ್ತ್ರ ಮಾಡಿದರು. ಮಠದ ಸಿಬ್ಬಂದಿಯೂ ಸಾಂಪ್ರದಾಯಿಕವಾಗಿ ಎಣ್ಣೆ ಶಾಸ್ತ್ರ ನೆರವೇರಿಸಿ ತೈಲಾಭ್ಯಂಜನ ಮಾಡಿಕೊಳ್ಳುವ […]

ದೀಪಾವಳಿ: ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಬೆಳಕು ಮೂಡಿಸುವ ಹಬ್ಬ

ಬೆಳಕಿನ ಹಬ್ಬ ದೀಪಾವಳಿ ಎಂದರೆ ಕೇವಲ ಹಣತೆಗಳನ್ನು ಬೆಳಗಿಸಿ ಸಂಭ್ರಮಿಸುವ ಆಚರಣೆಯಲ್ಲ. ಅದು ಮನುಷ್ಯನ ಬದುಕಿನ ಅಂಧಕಾರ, ಅಜ್ಞಾನ ಹಾಗೂ ಋಣಾತ್ಮಕ ಆಲೋಚನೆಗಳನ್ನು ದೂರಮಾಡಿ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ವಿಶೇಷ ಹಬ್ಬ. ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ’ ಎಂಬ ಉಪನಿಷತ್ತಿನ ಸಂದೇಶವೇ ದೀಪಾವಳಿಯ ಆಚರಣೆಯ ಹಿಂದಿರುವ ಆಧ್ಯಾತ್ಮಿಕ ಆಶಯವನ್ನು ಸಾರುತ್ತದೆ. ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗಬೇಕು ಎಂಬುದು ಇದರ ಅರ್ಥ. ಮನುಷ್ಯನ ಮನಸ್ಸು, ಬುದ್ಧಿ, ಆಚಾರ ಮತ್ತು ವಿಚಾರಗಳಿಗೆ ಅಂಟಿಕೊಂಡಿರುವ ಅಜ್ಞಾನದ ಕತ್ತಲೆಯನ್ನು […]

ಆಹಾ ಎಷ್ಟೊಂದು ಸಡಗರ ತುಳುನಾಡಿನ “ದೀಪಾವಳಿ”ಯ ವೈಭವ:

–ಬರಹ- ದಾಕ್ಷಾಯಣಿ. ಪಿ. ವಿ,ಮಂಗಳೂರು ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ, ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಆ ಅಪರೂಪದ ಸಂಭ್ರಮದ ನೆನಪಿನೊಂದಿಗೆ, ಇಂದು ಜಾಗತಿಕ ಮಟ್ಟದಲ್ಲೂ ಕಂಗೊಳಿಸುತ್ತಿರುವ ಹಾಗೂ ಯುನೆಸ್ಕೋದಿಂದಲೂ ಗೌರವಕ್ಕೆ ಪಾತ್ರವಾಗಿರುವ ಭಾರತದ ಪ್ರಮುಖ ಸಾಂಸ್ಕೃತಿಕ ಆಚರಣೆಯೇ ಈ ಬೆಳಕಿನ ಹಬ್ಬ ದೀಪಾವಳಿ. ​ಪರಂಪರೆ ಎಂದರೆ ಕೇವಲ ಇತಿಹಾಸದ ಸ್ಮಾರಕಗಳಲ್ಲ; ಅದು ತಲೆಮಾರಿನಿಂದ ತಲೆಮಾರಿಗೆ ಹರಿದುಬರುವ ಜೀವಂತ ಸಾಂಸ್ಕೃತಿಕ ಧಾರೆ. ಕಲ್ಲು-ಮಣ್ಣಿನ ಕಟ್ಟಡಗಳು ನಮ್ಮ ಇತಿಹಾಸದ ಹೆಜ್ಜೆಗುರುತುಗಳನ್ನು ಉಳಿಸಿದರೆ, ದೀಪಾವಳಿಯಂತಹ ಹಬ್ಬಗಳು ಆ ಇತಿಹಾಸಕ್ಕೆ […]

ಉಡುಪಿ: ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಅಪ್ರಾಪ್ತ ಬಾಲಕ ಸಹಿತ ನಾಲ್ವರು ಆರೋಪಿಗಳ ಬಂಧನ

ಉಡುಪಿ: ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಉತ್ತರ ಪ್ರದೇಶದ ಪವನ್ ಕುಮಾರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಆರೋಪಿಗಳ ಪತ್ತೆಗಾಗಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದ […]