ಉಡುಪಿಯ ವೈದ್ಯ ಡಾ. ಚಂದ್ರಶೇಖರ್ ಅವರನ್ನು ಕಡೆಗಣಿಸಿರುವುದು ಖಂಡನೀಯ: ಸುನಿಲ್ ಕುಮಾರ್

ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಸಂದರ್ಭದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಶೇಖರ್ ಅವರ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿ, ಬಳಿಕ ಕೈಬಿಟ್ಟು ಮತ್ತೊಬ್ಬರನ್ನು ಆಯ್ಕೆ ಮಾಡಿರುವ ಕ್ರಮ ತೀವ್ರ ಖಂಡನೀಯ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ವೈದ್ಯಕೀಯ ಕ್ಷೇತ್ರದ ಜತೆಗೆ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ. ಚಂದ್ರಶೇಖರ್ ಅವರು ಸದಾ ಜನರ ಧ್ವನಿಯಾಗಿ, ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಇಂತಹ ಗೌರವಾನ್ವಿತ ವ್ಯಕ್ತಿತ್ವದ […]
2027ರ ಜನಗಣತಿಗೆ ವೇಳಾಪಟ್ಟಿ ಪ್ರಕಟ: ಜನವರಿ 25ರಿಂದ ಮನೆ ಮನೆ ಸಮೀಕ್ಷೆ ಶುರು

ನವದೆಹಲಿ: ದೇಶದ ಬಹುನಿರೀಕ್ಷಿತ 2027ರ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರಕಾರ ವೇಳಾಪಟ್ಟಿ ಪ್ರಕಟಿಸಿದೆ. ಇದರ ಪ್ರಕಾರ, 2027ರ ಜನವರಿ 25ರಿಂದ ಫೆಬ್ರವರಿ 28ರವರೆಗೆ ದೇಶಾದ್ಯಂತ ಮನೆ ಮನೆಗೆ ತೆರಳಿ ಜನಗಣತಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಮನೆ ಮನೆ ಸಮೀಕ್ಷೆ ಆರಂಭಕ್ಕೂ ಮುನ್ನ ಸಾರ್ವಜನಿಕರಿಗೆ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜನವರಿ 10ರಿಂದ 24ರವರೆಗೆ ಆನ್ಲೈನ್ ಮೂಲಕ ಸ್ವಯಂ ಗಣತಿ ಪ್ರಕ್ರಿಯೆ ನಡೆಯಲಿದೆ. ಈ ಜನಗಣತಿಗೆ ಸಂಬಂಧಿಸಿದ ಉಲ್ಲೇಖಿತ ದಿನಾಂಕವನ್ನು […]
ಸುರತ್ಕಲ್ನಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ನೀಡುವಂತೆ ಪ್ರಯಾಣಿಕರ ಒತ್ತಾಯ!

ಸುರತ್ಕಲ್: ಬೆಂಗಳೂರು–ಕಾರವಾರ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಸುರತ್ಕಲ್ನಲ್ಲಿ ನಿಲುಗಡೆ ನೀಡದಿರುವ ರೈಲ್ವೆ ಇಲಾಖೆಯ ನಿರ್ಧಾರ ಸ್ಥಳೀಯ ಪ್ರಯಾಣಿಕರು ಹಾಗೂ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಿಂದಿನ ರೈಲಿಗೆ ತೋಕೂರಿನಲ್ಲಿ ನಿಲುಗಡೆ ನೀಡಲಾಗುತ್ತಿತ್ತು. ಅದೇ ವ್ಯವಸ್ಥೆಯನ್ನು ನೂತನ ವಂದೇ ಭಾರತ್ ರೈಲಿನಲ್ಲಿಯೂ ಮುಂದುವರಿಸಲಾಗಿದೆ. ಆದರೆ, ಪ್ರಮುಖ ವಾಣಿಜ್ಯ ಮತ್ತು ಶೈಕ್ಷಣಿಕ ಕೇಂದ್ರವಾಗಿರುವ ಸುರತ್ಕಲ್ನಲ್ಲಿಯೂ ನಿಲುಗಡೆ ಕಲ್ಪಿಸಬೇಕೆಂಬ ಬೇಡಿಕೆ ಬಲವಾಗಿ ಕೇಳಿಬಂದಿದೆ. ಸುರತ್ಕಲ್ ಪ್ರಮುಖ ಶೈಕ್ಷಣಿಕ, ಕೈಗಾರಿಕಾ ಹಾಗೂ ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ. ಇಲ್ಲಿ […]
ಸೌಜನ್ಯ ಪ್ರಕರಣದ ಮರುತನಿಖೆ ಚುರುಕು: ಮೃತದೇಹ ಪತ್ತೆಯಾದ ಸ್ಥಳದಲ್ಲಿ ಎಸ್ಐಟಿಯಿಂದ ಮರುಸೃಷ್ಟಿ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ಧರ್ಮಸ್ಥಳದ ಕಾಡಿಗೆ ಭೇಟಿ ನೀಡಿ ಮಹತ್ವದ ಪರಿಶೀಲನೆ ನಡೆಸಿದ್ದಾರೆ. ಸುಮಾರು 14 ವರ್ಷಗಳ ಹಿಂದೆ ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಧರ್ಮಸ್ಥಳದ ಮಣ್ಣಸಂಕದ ಕಾಡಿನ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಎಸ್ಐಟಿ ತಂಡ, ಅಂದಿನ ಘಟನೆಯ ವಿವರಗಳನ್ನು ಆಧರಿಸಿ ಸ್ಥಳದಲ್ಲೇ ಮರುಸೃಷ್ಟಿ ಪ್ರಕ್ರಿಯೆ ನಡೆಸಿತು. ಎಸ್ಐಟಿ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಮೃತದೇಹ […]
ಹಾಲು ಮತ್ತು ಮೊಸರಿನ ದರದಲ್ಲಿ ಭಾರೀ ಹೆಚ್ಚಳ: ಜನಸಾಮಾನ್ಯರಿಂದ ಆಕ್ರೋಶ

ಬೆಂಗಳೂರು: ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತೊಂದು ಶಾಕ್ ನೀಡಿದೆ. ನವೆಂಬರ್ 1ರಿಂದ ಹಾಲು ಮತ್ತು ಮೊಸರಿನ ದರದಲ್ಲಿ ಹೆಚ್ಚಳವಾಗಲಿದ್ದು, ಇದು ಮಧ್ಯಮ ವರ್ಗದ ಕುಟುಂಬಗಳ ತಿಂಗಳ ಬಜೆಟ್ ಮೇಲೆ ಮತ್ತಷ್ಟು ಹೊರೆ ಉಂಟುಮಾಡಲಿದೆ. ಹೊಸ ದರದ ಪ್ರಕಾರ ಲೀಟರ್ ಹಾಲಿನ ಬೆಲೆಯಲ್ಲಿ 8 ರೂ. ಹಾಗೂ ಅರ್ಧ ಕೆ.ಜಿ. ಮೊಸರಿನ ಬೆಲೆಯಲ್ಲಿ 14 ರೂ. ಹೆಚ್ಚಳವಾಗಲಿದೆ ಹಾಲಿನ ದರ ಏರಿಕೆಯನ್ನು ಹೇಗೋ ಒಪ್ಪಿಕೊಳ್ಳಬಹುದು. ಆದರೆ ಮೊಸರಿನ ಬೆಲೆಯನ್ನು ಇಷ್ಟೊಂದು […]