ಪಿಯುಸಿ, ಪದವೀಧರರಿಗೆ ಸರ್ಕಾರಿ ಉದ್ಯೋಗದ ಸುವರ್ಣಾವಕಾಶ: 5,431 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ,ಯಾವೆಲ್ಲಾ ಹುದ್ದೆಗಳಿವೆ?

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ರಾಜ್ಯದ ನಿರುದ್ಯೋಗಿ ಯುವಜನರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ರಾಜ್ಯದ 33 ಸರ್ಕಾರಿ ಇಲಾಖೆಗಳು, ನಿಗಮಗಳು ಹಾಗೂ ಮಂಡಳಿಗಳಲ್ಲಿ ಖಾಲಿ ಇರುವ 5,431 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪಿಯುಸಿ ಉತ್ತೀರ್ಣರಾದವರು ಹಾಗೂ ಪದವೀಧರರಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ ವೃಂದ (KK) […]

‘ವಾಯ್ಸ್ ಆಫ್ ಚಾಣಕ್ಯ–2026’ ರಾಜ್ಯಮಟ್ಟದ ಕರೋಕೆ ಸಂಗೀತ ಸ್ಪರ್ಧೆ; ಕುಂದಾಪುರದಲ್ಲಿ ನ.1ರಂದು ಆಡಿಷನ್

ಕುಂದಾಪುರ: ಚಾಣಕ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ಸ್, ಹೆಬ್ರಿ ಇದರ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿರುವ ರಾಜ್ಯಮಟ್ಟದ ಕರೋಕೆ ಸಂಗೀತ ಸ್ಪರ್ಧೆ ‘ವಾಯ್ಸ್ ಆಫ್ ಚಾಣಕ್ಯ–2026’ರ 9ನೇ ಆವೃತ್ತಿಯ ಆಯ್ಕೆ ಪ್ರಕ್ರಿಯೆ ನ.1ರಂದು ಕುಂದಾಪುರದ ಬಂಡಾರ್ಕರ್ಸ್ ಕಾಲೇಜು ರಸ್ತೆಯ ಶಾಸ್ತ್ರಿ ಸರ್ಕಲ್‌ನ ಪೂರ್ವಿಕಾ ಕಾಂಪ್ಲೆಕ್ಸ್‌ನಲ್ಲಿರುವ ಎಸ್.ಪಿ. ಮ್ಯೂಸಿಕಲ್ಸ್ ಸಂಗೀತ ತರಬೇತಿ ಕೇಂದ್ರದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ. ಎಸ್.ಪಿ. ಮ್ಯೂಸಿಕಲ್ಸ್ ಕುಂದಾಪುರ ಇವರ ಸಹಯೋಗದೊಂದಿಗೆ ಆಯೋಜಿಸಿರುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ […]

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರದ್ದುಗೊಳಿಸಿರುವುದು ಸಮಸ್ತ ಕನ್ನಡಿಗರಿಗೆ ಮಾಡಿರುವ ಅವಮಾನ: ಅನ್ಸಾರ್ ಅಹಮದ್

ಉಡುಪಿ: ಪ್ರತಿ ವರ್ಷ ನವೆಂಬರ್ ಒಂದರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವಂತಹ ಸಾಧಕರನ್ನು ಗುರುತಿಸಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದು ಮೊದಲಿಂದ ಬಂದಿರುವ ಸಂಪ್ರದಾಯವಾಗಿರುತ್ತದೆ. ಉಡುಪಿ ಜಿಲ್ಲಾಡಳಿತ ಕಚೇರಿಯಿಂದ ಈ ಸಲದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿರದ್ದಾಗಿದೆ ಎಂಬ ಮಾಹಿತಿ ಬಂದಿದ್ದು, ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕನ್ನಡ ಕೋಸ್ಕರ ದುಡಿದವರಿಲ್ಲವೇ, ಅಥವಾ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೊರತೆ ಇದೆಯೇ […]