ಮಣಿಪಾಲದ  MSDCಯಲ್ಲಿ ಹೇರ್ ಟ್ರೈನರ್ ಹುದ್ದೆಗೆ ನೇಮಕಾತಿ: ಆಸಕ್ತರು ಮಿಸ್ ಮಾಡದೇ ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ (MSDC) ಹಾಗೂ Orane International ಸ್ಕೂಲ್ ಆಫ್ ಬ್ಯೂಟಿ ಆ್ಯಂಡ್ ವೆಲ್‌ನೆಸ್ ವತಿಯಿಂದ ಹೇರ್ ಟ್ರೈನರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಲೂನ್ ಮತ್ತು ಬ್ಯೂಟಿ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಹೊಂದಿರುವ ಪುರುಷರು ಹಾಗೂ ಮಹಿಳೆಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೂದಲು ವಿನ್ಯಾಸ ಮತ್ತು ಆರೈಕೆಯ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಆಸಕ್ತಿ, ಉತ್ತಮ ಸಂವಹನ ಕೌಶಲ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತಾಳ್ಮೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾಗುವ […]

ನವೆಂಬರ್‌ 1ರಿಂದಲೇ ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆ

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹8 ಹೆಚ್ಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು. ಪರಿಷ್ಕೃತ ದರ ನವೆಂಬರ್‌ 1ರಿಂದಲೇ ಜಾರಿಗೆ ಬರಲಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಹೆಚ್ಚುವರಿ ಹಣ ಯಾರಿಗೆ ಹಂಚಿಕೆ? ಪ್ರಸ್ತಾವಿತ ₹8 ದರ ಏರಿಕೆಯಲ್ಲಿ ₹7 ಹಾಲು ಉತ್ಪಾದಕರಿಗೆ ಹಾಗೂ ₹1 ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ […]

ಸೌಜನ್ಯ ಪ್ರಕರಣದ ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್ !

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಪ್ರಕರಣದ ತನಿಖೆಯ ಕುರಿತು ಮತ್ತಷ್ಟು ಕುತೂಹಲ ಮೂಡಿಸಿದೆ. ಶಶಿಕುಮಾರ್ ನೇಮಕಾತಿಗೆ ಹೋರಾಟಗಾರರ ಆಕ್ಷೇಪ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಟುಂಬಸ್ಥರು ಮತ್ತು ವಿವಿಧ ಸಂಘಟನೆಗಳ ಒಕ್ಕೂಟವು ಶಶಿಕುಮಾರ್ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ […]

ಸೌಜನ್ಯ ಕೇಸ್‌| ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಕೈಬಿಡುವಂತೆ ಶಶಿಕುಮಾರ್ ಮನವಿ

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ(Soujanya Rape and Murder Case) ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಶಶಿಕುಮಾರ್(Shashi Kumar) ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಎಂ.ಎ. ಸಲೀಂ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಸೌಜನ್ಯ ಸಾವಿಗೆ ನ್ಯಾಯ ಕೋರಿ ಬೀದಿಗಿಳಿದಿರುವ ಸೌಜನ್ಯ ಪರ ಹೋರಾಟಗಾರರು ಹಾಗೂ ಕುಟುಂಬಸ್ಥರು ಎಸ್‌ಐಟಿ ನೇತೃತ್ವ ವಹಿಸಿರುವ ಐಜಿಪಿ ಶಶಿಕುಮಾರ್ ಅವರ ವಿರುದ್ಧ ಗಂಭೀರ ಆಕ್ಷೇಪ […]

ಒಮ್ಮೆ ಕರಿಯಲು ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತಿದ್ದೀರಾ? ಹೀಗೆ ಮಾಡೋದು ಆರೋಗ್ಯಕ್ಕೆ ಎಷ್ಟೊಂದು ಮಾರಕ!

ಪೂರಿ, ಬಜ್ಜಿ, ಸಮೋಸಾ, ಪಕೋಡಾ ಸೇರಿದಂತೆ ವಿವಿಧ ತಿಂಡಿಗಳನ್ನು ಕರಿಯಲು ಬಳಸಿದ ಎಣ್ಣೆಯನ್ನು ಎಸೆಯದೆ ಮತ್ತೆ ಅಡುಗೆಗೆ ಬಳಸುವುದು ಅನೇಕ ಮನೆಗಳಲ್ಲಿ ಸಾಮಾನ್ಯ. ಹಣ ಉಳಿಸುವ ಉದ್ದೇಶದಿಂದ ಅನುಸರಿಸುವ ಈ ಅಭ್ಯಾಸ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಎಣ್ಣೆಯನ್ನು ಪದೇ ಪದೇ ಹೆಚ್ಚಿನ ತಾಪಮಾನದಲ್ಲಿ ಕಾಯಿಸುವುದರಿಂದ ಅದರ ರಾಸಾಯನಿಕ ಗುಣಗಳಲ್ಲಿ ಬದಲಾವಣೆಗಳಾಗಿ ಹಾನಿಕಾರಕ ಸಂಯುಕ್ತಗಳು ಉತ್ಪತ್ತಿಯಾಗಬಹುದು. ಪುಣೆಯ ಎಂಒಸಿ ಕ್ಯಾನ್ಸರ್ ಕೇರ್‌ನ ಕ್ಯಾನ್ಸರ್ ತಜ್ಞ ಡಾ. ನಿಖಿಲ್ ಶಿರ್ಸಿ ಅವರ ಪ್ರಕಾರ, ಅಡುಗೆ ಎಣ್ಣೆಯನ್ನು ಮರುಮರು […]