ಮಂಗಳೂರು: ಮಹಿಳೆ ನಾಪತ್ತೆ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಚನಾ (35) ಎಂಬಾಕೆ ಸೆ.17ರಂದು ಕೆಲಸಕ್ಕೆಂದು ಹೋದವರು ಮನೆಗೆ ವಾಪಸ್ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈಕೆ ರಾಘವೇಂದ್ರ (42) ಎಂಬಾತನ ಜೊತೆ ಹೋಗಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 5 ಅಡಿ ಎತ್ತರದ, ದುಂಡು ಮುಖದ, ದಪ್ಪಶರೀರದ ಈಕೆ ಕಾಣೆಯಾದ ದಿನ ಬಿಳಿ ಬಣ್ಣದ ಚುಕ್ಕೆಗಳಿರುವ ಚೂಡಿದಾರ ಧರಿಸಿದ್ದರು. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಈಕೆಯ ಬಗ್ಗೆ ಮಾಹಿತಿಯಿದ್ದರೆ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ […]
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಉಡುಪಿಯಲ್ಲಿ ‘ಊರೂರು ಜಂತರ್ ಮಂತರ್’ ಪ್ರತಿಭಟನೆ

ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಸಹಬಾಳ್ವೆ ಸಂಘಟನೆ ಹಾಗೂ ವಿವಿಧ ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ನಿಂದ ಜೋಡುಕಟ್ಟೆಯವರೆಗೆ ‘ಊರೂರು ಜಂತರ್ ಮಂತರ್’ ಹೆಸರಿನಲ್ಲಿ ಪ್ರತಿಭಟನೆ ನಡೆಯಿತು. ಕ್ಲಾಕ್ ಟವರ್ ಬಳಿಯಿಂದ ಕಾಲ್ನಡಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜೋಡುಕಟ್ಟೆಯಲ್ಲಿ ಸಭೆ ನಡೆಸಿ, ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರೆ ಭವ್ಯ ನರಸಿಂಹಮೂರ್ತಿ, 2014ರಿಂದ ಪ್ರಧಾನಿ ನರೇಂದ್ರ […]
ಉಡುಪಿಯಲ್ಲಿ ಪ್ರಿಯದರ್ಶಿನಿ ಸೊಸೈಟಿ ಶಾಖೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆಯು ಉಡುಪಿಯ ತಾಲೂಕು ಕಚೇರಿ, ಬಳಿಯ ಸನಿಲ್ ಪ್ಲಾಜಾ ಕಟ್ಟಡ ದಲ್ಲಿ ಅಕ್ಟೋಬರ್ 25ನೇ ತಾರೀಖಿನಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾರ್ಡ್ ತಿಳಿಸಿರುತ್ತಾರೆ.ಸಹಕಾರಿ ರಂಗದ ದಿಗ್ಗಜರಾದ ದಿವಂಗತ ಎಚ್ ನಾರಾಯಣ ಸನಿಲ್ ಮತ್ತು ದಿವಂಗತ ಪಂಜದ ಗುತ್ತು ಶಾಂತರಾಮ ಶೆಟ್ಟಿ ರವರ ಪ್ರೇರಣೆಯಂತೆ ಕಳೆದ ಐದು ವರ್ಷದ ಹಿಂದೆ ಪ್ರಾರಂಭಗೊAಡ ಪ್ರಿಯದರ್ಶಿನಿ ಕೋ […]
ಮಣಿಪಾಲ MSDC- Orane International ಸ್ಕೂಲ್ ಆಫ್ ಬ್ಯೂಟಿ ಆ್ಯಂಡ್ ವೆಲ್ನೆಸ್ನಲ್ಲಿದೆ ಅಕಾಡೆಮಿಕ್ ಕೌನ್ಸೆಲರ್ ಹುದ್ದೆ: ಆಸಕ್ತಿ ಇದ್ರೆ ಅರ್ಜಿ ಸಲ್ಲಿಸಿ

ಮಣಿಪಾಲ: ಮಣಿಪಾಲದಲ್ಲಿರುವ MSDC ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಹಾಗೂ Orane International ಸ್ಕೂಲ್ ಆಫ್ ಬ್ಯೂಟಿ ಆ್ಯಂಡ್ ವೆಲ್ನೆಸ್ನಲ್ಲಿ ಅಕಾಡೆಮಿಕ್ ಕೌನ್ಸೆಲರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆಕರ್ಷಕ ವ್ಯಕ್ತಿತ್ವ ಹೊಂದಿರಬೇಕು. ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳ ಮೇಲೆ ಉತ್ತಮ ಹಿಡಿತವಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ಅರಿವು ಹೊಂದಿರಬೇಕು. ತಂಡದೊಂದಿಗೆ ಕೆಲಸ ಮಾಡುವ ಮನೋಭಾವ ಮತ್ತು ಜನರೊಂದಿಗೆ ಉತ್ತಮವಾಗಿ ಸಂವಹನ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ಸಾಮರ್ಥ್ಯವೂ ಅಗತ್ಯವಾಗಿದೆ. […]
ಜಿಯೋ ಐಪಿಒಗೆ 7.40 ಲಕ್ಷ ಕೋಟಿ ಬಿಡ್ – ಅರ್ಜಿ ಸಲ್ಲಿಕೆಯಲ್ಲಿ ವಿಶ್ವದಾಖಲೆ

ಮುಂಬೈ: ಭಾರತದ ಷೇರು ಮಾರುಕಟ್ಟೆ(Indian Share Market) ಇತಿಹಾಸದಲ್ಲೇ ಅತಿ ದೊಡ್ಡ ಸಾರ್ವಜನಿಕ ಕೊಡುಗೆ (IPO) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಿಲಯನ್ಸ್(Reliance) ಸಮೂಹದ ಜಿಯೋ ಪ್ಲಾಟ್ಫಾರ್ಮ್ಸ್(Jio Platforms) ಐಪಿಒ ಶುಕ್ರವಾರ ಅಭೂತಪೂರ್ವ ಬಿಡ್ಡಿಂಗ್ನೊಂದಿಗೆ ಮುಕ್ತಾಯಗೊಂಡಿದೆ. ಆ್ಯಂಕರ್ ಹೂಡಿಕೆದಾರರ ಬೇಡಿಕೆ ಸೇರಿದಂತೆ ಒಟ್ಟು ಬರೋಬ್ಬರಿ 7.40 ಲಕ್ಷ ಕೋಟಿ ರೂ. ಮೌಲ್ಯದ ಬಿಡ್ಗಳನ್ನು ಸೆಳೆಯುವ ಮೂಲಕ ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. 30,213 ಕೋಟಿ ರೂ. ಗಾತ್ರದ ಈ ಐಪಿಒ ಕೇವಲ ಹಣದ ಹರಿವಿನಲ್ಲಿ ಮಾತ್ರವಲ್ಲದೆ […]