ರಾಜವೈಭವದೊಂದಿಗೆ ಮತ್ತೆ ಹಳಿಗಿಳಿದ ಗೋಲ್ಡನ್ ಚಾರಿಯೆಟ್‌! ಈ ರೈಲಿನಲ್ಲಿದೆ ರಾಜಾತಿಥ್ಯ!

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯೆಟ್‌’ (Golden Chariot) ಹೊಸ ರೂಪದಲ್ಲಿ ಮತ್ತೆ ಸಂಚಾರ ಆರಂಭಿಸಿದೆ. ಪ್ರವಾಸೋದ್ಯಮ ಇಲಾಖೆಯ ಈ ಐಷಾರಾಮಿ ರೈಲಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ರೈಲ್ವೆ ಸಚಿವ ವಿ. ಸೋಮಣ್ಣ ಚಾಲನೆ ನೀಡಿದ್ದಾರೆ. 2026-27ನೇ ಸಾಲಿನ ಹೊಸ ಪ್ರವಾಸ ಸರಣಿ ಆರಂಭವಾಗಿದ್ದು, ಮೊದಲ ಪ್ರಯಾಣದ ಟಿಕೆಟ್‌ಗಳು ಈಗಾಗಲೇ ಸಂಪೂರ್ಣ ಮಾರಾಟವಾಗಿವೆ. ರೈಲಿನ ಪ್ರತಿ ಪ್ರಯಾಣಿಕರಿಗೆ ₹3.5 ಲಕ್ಷದಿಂದ ₹4.4 ಲಕ್ಷದವರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ. ‘ಪ್ರೈಡ್ ಆಫ್ ಕರ್ನಾಟಕ’ […]

ಕುಸ್ತಿ ಪಂದ್ಯಾಟದಲ್ಲಿ ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಕುಂದಾಪುರ: ಹಳಿಯಾಳದ ವಿಶ್ವನಾಥ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕುಂದಾಪುರದ ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪದಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರಣೀತ್ ರೈ ಕಂಚಿನ ಪದಕ ಹಾಗೂ ವಿದ್ಯಾರ್ಥಿನಿ ಹರ್ಷಿಣಿ ಬೆಳ್ಳಿಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆ ಉದ್ಘಾಟನೆ; ನಿರೂಪಣೆಯಲ್ಲಿ ಜ್ಞಾನ, ಆತ್ಮವಿಶ್ವಾಸ, ಸಿದ್ಧತೆ ಮತ್ತು ಸ್ವಂತ ಶೈಲಿ ಮುಖ್ಯ: ನಿತೇಶ್ ಪೂಜಾರಿ ಮಾರ್ನಾಡ್

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆ ‘ಅಭಿವ್ಯಕ್ತಿ’ಯ 2026–27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ನಡೆಯಿತು. ನಿರೂಪಕ ನಿತೇಶ್ ಪೂಜಾರಿ ಮಾರ್ನಾಡ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿರೂಪಣೆ ಎನ್ನುವುದು ಕೇವಲ ಮಾತಿನ ಕಲೆಯಲ್ಲ, ಅದಕ್ಕೆ ಜ್ಞಾನ, ಆತ್ಮವಿಶ್ವಾಸ, ಪೂರ್ವಸಿದ್ಧತೆ, ವಿಷಯದ ಮೇಲಿನ ಆಸಕ್ತಿ, ಧ್ವನಿಯ ಏರಿಳಿತ ಮತ್ತು ಬದ್ಧತೆ ಅತ್ಯಗತ್ಯ ಎಂದರು. ನಿರೂಪಣೆ ಸುಲಭದ ಕೆಲಸವಲ್ಲ. ಪ್ರತಿಯೊಂದು […]

2028ರ ವೇಳೆಗೆ ಭಾರತದಲ್ಲೂ ಆಪಲ್‌, ಸ್ಯಾಮ್‌ಸಂಗ್‌ಗೆ ಪೈಪೋಟಿ ನೀಡುವ ಮೊಬೈಲ್‌ ಕಂಪನಿಗಳು: ಕೇಂದ್ರ ಅಶ್ವಿನಿ ವೈಷ್ಣವ್‌

ನವದೆಹಲಿ : 2028ರ ವೇಳೆಗೆ ಭಾರತದಲ್ಲೂ ಆಪಲ್‌ (Apple) ಮತ್ತು ಸ್ಯಾಮ್‌ಸಂಗ್‌ (Samsung) ನಂತಹ ಜಾಗತಿಕ ಮಟ್ಟದ ಮೊಬೈಲ್‌ ಕಂಪನಿಗಳು ರೂಪುಗೊಳ್ಳಲಿವೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿಯೇ ವಿನ್ಯಾಸಗೊಂಡು, ತಯಾರಾಗುವ ಭಾರತೀಯ ಬ್ರಾಂಡ್‌ನ ಮೊಬೈಲ್‌ ಫೋನ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ. 2028ರ ಅಕ್ಟೋಬರ್‌ 23ರ ವೇಳೆಗೆ ಭಾರತದಲ್ಲಿ ವಿನ್ಯಾಸಗೊಳಿಸಿ, ತಯಾರಿಸಿದ ಭಾರತೀಯ ಬ್ರಾಂಡ್‌ನ ಮೊಬೈಲ್‌ ಫೋನ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಮೂರು […]

ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಯುವ ಸಂಸತ್ತು-2026ರ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಕುಂದಾಪುರ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಧಾನಸಭೆ ಮಾದರಿಯ ಯುವ ಸಂಸತ್ತು-2026 ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚರ್ಚಾ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳು: * ಮಯಸ್ಕರ್ ಭಟ್ – ದ್ವಿತೀಯ ವಾಣಿಜ್ಯ ವಿಭಾಗ * ವರಪ್ರಸಾದ್ – ದ್ವಿತೀಯ ವಿಜ್ಞಾನ ವಿಭಾಗ * ಮನ್ವಿತಾ – ದ್ವಿತೀಯ […]