ಜಂಬೂ ಸವಾರಿಗೆ ಪುಷ್ಪಾರ್ಚನೆ – ಪ್ರೋಟೋಕಾಲ್‌ನಲ್ಲಿ ಸಿಎಂ ಪತ್ನಿ ಹೆಸರು ಇರಲಿಲ್ಲ: ಸಚಿವ ಯತೀಂದ್ರ

ಮೈಸೂರು: ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಮೊದಲ ಬಾರಿಗೆ ಜಂಜೂಸವಾರಿಗೆ ಪುಷ್ಪಾರ್ಚನೆ ಮಾಡಿದ್ದು, ದಸರಾ (Dasara) ಕೂಡ ಯಶಸ್ವಿಯಾಗಿ ನೆರವೇರಿದೆ. ಆದ್ರೆ ದಸರಾದಲ್ಲಿ ನಡೆದ ಕೆಲ ಘಟನೆಗಳ ಬಗ್ಗೆ ಈಗ ಅಪಸ್ವರ ಎದ್ದಿದೆ. ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ್ದು, ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು, ಶಿಷ್ಟಾಚಾರ ಪಟ್ಟಿಯಲ್ಲಿ […]

ಮಾಬುಕಳ: ಸೈಕಲ್ ಗೆ ಲಾರಿ ಡಿಕ್ಕಿ; ಸೈಕಲ್ ಸವಾರ ಸಾವು

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ತಾಲೂಕಿನ ಮಾಬುಕಳ ಸರ್ಕಲ್‌ನಲ್ಲಿ ಲಾರಿಯೊಂದು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ನಡೆದಿದೆ.ಮೃತರನ್ನು ಬಾಳ್ಕುದ್ರು ನಿವಾಸಿ ರೊನಾಲ್ಡ್ ಲೂವಿಸ್ (62) ಎಂದು ಗುರುತಿಸಲಾಗಿದೆ. ಅವರು ಹಂಗಾರಕಟ್ಟೆ ಅಂಚೆ ಕಚೇರಿಯಲ್ಲಿ ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ರೊನಾಲ್ಡ್ ಅವರು ಸೈಕಲ್‌ನಲ್ಲಿ ಹಂಗಾರಕಟ್ಟೆಯಿಂದ ಮಾಬುಕಳ ಸರ್ಕಲ್‌ಗೆ ಬಂದು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ, ಉಡುಪಿ ಕಡೆಯಿಂದ ಕುಮಟಾ ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ, […]

Asian Para Games – ವಿಶ್ವ ದಾಖಲೆಯೊಂದಿಗೆ ಭಾರತಕ್ಕೆ ಮತ್ತೆರಡು ಚಿನ್ನ

ನಗೋಯಾ: ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ (Asian Para Games) ಭಾರತದ ಸಂದೀಪ್ ಸಿಂಗ್ ಮನ್ ಮತ್ತು ಹ್ಯಾನಿ ಅವರು ಕ್ರಮವಾಗಿ ಪುರುಷರ 400 ಮೀಟರ್ಸ್ ಮತ್ತು ಜಾವೆಲಿನ್ ಸ್ಪರ್ಧೆಗಳಲ್ಲಿ ದೇಶಕ್ಕೆ ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ. ಐಚಿ ನಗೋಯಾದಲ್ಲಿ (Aichi Nagoya) ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ 400 ಮೀಟರ್ಸ್‌ನಲ್ಲಿ ಸಂದೀಪ್ ಸಿಂಗ್ (Sandeep Singh) ಹಾಗೂ ಜಾವೆಲಿನ್‌ನಲ್ಲಿ ಹ್ಯಾನಿ (Haney) ವಿಶ್ವ ದಾಖಲೆಯನ್ನು ನಿರ್ಮಿಸುವ ಮೂಲಕ ಭಾರತಕ್ಕೆ ಮತ್ತೆರೆಡು ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ. […]

ಕಾರ್ಗಿಲ್‌ನಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹವನ್ನು ಪಾಕಿಸ್ತಾನ ಸ್ವೀಕರಿಸಲಿಲ್ಲ: ಭಾರತ ಟಾಂಗ್‌

ನವದೆಹಲಿ: ಭಯೋತ್ಪಾದನೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಂತಹ ವಿಷಯಗಳಲ್ಲಿ ಪಾಕಿಸ್ತಾನ (Pakistan) ಅನುಸರಿಸುತ್ತಿರುವ ದ್ವಂದ್ವ ನಿಲುವು ಮತ್ತೊಮ್ಮೆ ಬಯಲಾಗಿದೆ. ಭಾರತವು (India) ವಿಶ್ವಸಂಸ್ಥೆ ಮುಂದೆ ಮತ್ತೊಮ್ಮೆ ಸ್ಪಷ್ಟ ಸಾಕ್ಷ್ಯಾಧಾರಗಳನ್ನಿಟ್ಟು, ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಆಂತರಿಕ ವಿಷಯಗಳ ಕುರಿತು ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಖಡಕ್‌ ಆಗಿ ಮಾತನಾಡಿದೆ. ವಿಶೇಷ ಸಂದರ್ಭಗಳಲ್ಲಿ ಅಂತ್ಯಕ್ರಿಯೆಯ ಹಕ್ಕುಗಳಿಗೆ ಸಂಬಂಧಿಸಿದಂತೆ, ‘ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯ’ ಕುರಿತ ವಿಶೇಷ ವರದಿಗಾರರೊಂದಿಗೆ ಸಂವಾದ ನಡೆಯಿತು. ಭಾರತದ ಇತರ […]

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡು ಚಿನ್ನ; ವಿಶ್ವ ದಾಖಲೆ ನಿರ್ಮಿಸಿದ ಕ್ರೀಡಾಪಟುಗಳು

ನಗೋಯಾ: ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದು, ಸಂದೀಪ್ ಸಿಂಗ್ ಮನ್ ಮತ್ತು ಹ್ಯಾನಿ ಅವರು ಕ್ರಮವಾಗಿ ಪುರುಷರ 400 ಮೀಟರ್ ಓಟ ಹಾಗೂ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಐಚಿ ನಗೋಯಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಸಂದೀಪ್ ಸಿಂಗ್ ಮನ್ ಅವರು ಪುರುಷರ 400 ಮೀಟರ್ ಓಟವನ್ನು 52.28 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಓಟದ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಅವರು, ಸೌದಿ ಅರೇಬಿಯಾದ ಅಲ್ಸಾನಾ ನೂರ್ ಅವರ […]