ಇನ್ಸ್ಟಾಗ್ರಾಮ್ನಲ್ಲಿ ಹರಿದಾಡಿತು ಎಐ ಬಳಸಿ ವಿಧಾನಸೌಧ ಸ್ಫೋಟಿಸಿದ ವಿಡಿಯೋ: ವಿಡಿಯೋ ಮಾಡಿದ ಯುವಕನ ವಿರುದ್ಧ ನೆಟ್ಟಿಗರು ಗರಂ!

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧವನ್ನು ಬಾಂಬ್ ಸ್ಫೋಟದಿಂದ ಧ್ವಂಸಗೊಳಿಸಿದಂತೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ವಿಡಿಯೋವೊಂದು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘Jnx king Hg’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ ಎನ್ನಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಎಐ ತಂತ್ರಜ್ಞಾನ ಬಳಸಿ ಬಾಂಬ್ ಸ್ಫೋಟ ಸಂಭವಿಸಿದಂತೆ ಎಡಿಟ್ ಮಾಡಲಾಗಿದೆ. ಅಲ್ಲದೆ, ವಿಧಾನಸೌಧವನ್ನು ಬಾಂಬ್ನಿಂದ ಉಡಾಯಿಸಿರುವುದಾಗಿ ಯುವಕ ಬರೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ದಸರಾ ಹಬ್ಬದ […]
ಮಂಗಳೂರು, ಉಡುಪಿಯಲ್ಲಿ KSRTC ದಸರಾ ಟೂರ್ ಪ್ಯಾಕೇಜ್ ವಿಸ್ತರಣೆ: ಅತ್ಯಂತ ಕಡಿಮೆ ಬೆಲೆಗೆ ನೀವು ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು?

ಮಂಗಳೂರು: ಮಂಗಳೂರು ಮತ್ತು ಉಡುಪಿಯಿಂದ ವಿವಿಧ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ದಸರಾ ವಿಶೇಷ ಪ್ರವಾಸ ಪ್ಯಾಕೇಜ್ಗಳನ್ನು ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು ಅಕ್ಟೋಬರ್ 25ರವರೆಗೆ ವಿಸ್ತರಿಸಿದೆ. ಮಂಗಳೂರು ಪ್ಯಾಕೇಜ್: ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ‘ದಸರಾ ನವದುರ್ಗಾ ದರ್ಶನ’ ಬಸ್ ಮರೋಳಿಯ ಸೂರ್ಯನಾರಾಯಣ ದೇವಾಲಯ, ಬೋಳಾರದ ಮಾರಿಯಮ್ಮ ದೇವಾಲಯ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ […]
ಮಂಗಳನ ಚಂದ್ರನಿಂದ ಮಣ್ಣು,ಧೂಳು, ಕಲ್ಲಿನ ಮಾದರಿ ತರಲು ಜಪಾನ್ ಬಾಹ್ಯಾಕಾಶ ನೌಕೆ ಉಡಾವಣೆ!

ಟೋಕಿಯೋ (ಜಪಾನ್): ಮಂಗಳ ಗ್ರಹದ ಚಂದ್ರನ ಅನ್ವೇಷಣೆ ನಡೆಸಿ, ಅಲ್ಲಿನ ಮಣ್ಣು, ಧೂಳು ಮತ್ತು ಕಲ್ಲಿನ ಮಾದರಿಗಳನ್ನು ಭೂಮಿಗೆ ತರುವ ಉದ್ದೇಶದಿಂದ ಜಪಾನ್ ಬಾಹ್ಯಾಕಾಶ ನೌಕೆಯೊಂದನ್ನು ಉಡಾವಣೆ ಮಾಡಿದೆ. ಐದು ವರ್ಷಗಳ ಈ ಮಹತ್ವಾಕಾಂಕ್ಷಿ ಕಾರ್ಯಾಚರಣೆಯಲ್ಲಿ ವಿಶ್ವದ ಐದು ಬಾಹ್ಯಾಕಾಶ ಸಂಸ್ಥೆಗಳು ಕೈಜೋಡಿಸಿವೆ. ಜಪಾನ್ ಬಾಹ್ಯಾಕಾಶ ಅನ್ವೇಷಣಾ ಸಂಸ್ಥೆ (JAXA) ತನೆಗಾಶಿಮಾ ದ್ವೀಪದಲ್ಲಿರುವ ದೇಶದ ಪ್ರಮುಖ ಬಾಹ್ಯಾಕಾಶ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಿದೆ. ಉಡಾವಣೆಯಾದ ಸುಮಾರು ಒಂದು ಗಂಟೆಯ ಬಳಿಕ ನೌಕೆಯು ರಾಕೆಟ್ನ ಮೇಲಿನ ಹಂತದಿಂದ ಯೋಜನೆಯಂತೆ […]
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ!

ಬೆಂಗಳೂರು: ವಿಶಾಖಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ ಸೋಮವಾರ ಹಕ್ಕಿ ಡಿಕ್ಕಿ ಹೊಡೆದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದ್ದು, ಅದರಲ್ಲಿದ್ದ 148 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ. ಹಕ್ಕಿ ಡಿಕ್ಕಿ ಹೊಡೆದಿದ್ದರೂ ವಿಮಾನವು ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ. ಭೂಸ್ಪರ್ಶದ ಬಳಿಕ ವಿಮಾನವನ್ನು ಪಾರ್ಕಿಂಗ್ ಸ್ಟ್ಯಾಂಡ್ಗೆ ಸ್ಥಳಾಂತರಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಥವಾ ಸಿಬ್ಬಂದಿಗೆ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ. ಇದೇ ರೀತಿಯ ಘಟನೆ ಶನಿವಾರವೂ ಸಂಭವಿಸಿತ್ತು. ದುಬೈನಿಂದ ಆಗಮಿಸಿದ್ದ ಎಮಿರೇಟ್ಸ್ […]