ರೂ.35 ಕೋಟಿ ಮೌಲ್ಯದ ಕ್ಯಾನ್ಸರ್ ಚಿಕಿತ್ಸಾ ಉಪಕರಣಗಳಿಗೆ ಆಯುಧ ಪೂಜೆ: ಬಿಪಿಎಲ್ ಕುಟುಂಬಗಳಿಗೆ ಗೌರವ

ಮಂಗಳೂರು: ಬಡ ರೋಗಿಗಳಿಗೂ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ದೊರೆಯಬೇಕು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ, ಮಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಇಬ್ಬರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ವಿಶೇಷ ಗೌರವ ನೀಡಲಾಯಿತು. ಆಸ್ಪತ್ರೆಯ ಮಾಲೀಕರು, ನಿರ್ದೇಶಕರು ಅಥವಾ ಹಿರಿಯ ವೈದ್ಯರ ಬದಲಿಗೆ ಈ ಕುಟುಂಬಗಳ ಸದಸ್ಯರು ನೂತನ ವೈದ್ಯಕೀಯ ಉಪಕರಣಗಳಿಗೆ ಆಯುಧ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು. ಆಸ್ಪತ್ರೆಯಲ್ಲಿ ₹25 ಕೋಟಿ ವೆಚ್ಚದ ಅತ್ಯಾಧುನಿಕ ಟ್ರೂಬೀಮ್ ರೇಡಿಯೊಥೆರಪಿ ವ್ಯವಸ್ಥೆ […]
ಉಡುಪಿ ಉಚ್ಚಿಲ ದಸರಾ-2026: ಅ.21 ರಂದು ಬೃಹತ್ ಶೋಭಾಯಾತ್ರೆ ಮೆರವಣಿಗೆ – ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ ಉಚ್ಚಿಲ ದಸರಾ-2026ರ ಬೃಹತ್ ಶೋಭಾಯಾತ್ರೆ ಮೆರವಣಿಗೆಯು ಅಕ್ಟೋಬರ್ 21ರ ಬುಧವಾರದಂದು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಾಗಲಿರುವ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆಯಾಗಿ ಟ್ರಾಫಿಕ್ ಸಮಸ್ಯೆ ಆಗುವ ಸಾಧ್ಯತೆ ಇದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶ ಹೊರಡಿಸಿದ್ದಾರೆ. ಅ.21ರಂದು ಅಪರಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರದ ಮಾರ್ಗದಲ್ಲಿ ಬದಲಾವಣೆ ಹಾಗೂ […]
ಮಂಗಳೂರು ದಸರಾ-2026 – ಅ.21 ರಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣೆಗೆ; ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ.!

ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ದಿನಾಂಕ: 21-10-2026 ರಂದು ಬುಧವಾರ ಸಂಜೆ 4-00 ಗಂಟೆಯಿಂದ ದಿನಾಂಕ 22-10-2026 ರಂದು ಬೆಳಿಗ್ಗೆ 6-00 ಗಂಟೆಯ ವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣೆಗೆ ಮತ್ತು ಟ್ಯಾಬುಲುಗಳು ‘ಕುದ್ರೋಳಿ ದೇವಸ್ಥಾನದ ದ್ವಾರ – ಮಣ್ಣಗುಡ್ಡೆ ಜಂಕ್ಷನ್ – ನಾರಾಯಣಗುರು ವೃತ್ತ (ಲೇಡಿಹಿಲ್) – ಲಾಲ್ಭಾಗ್ – ಬಳ್ಳಾಲ್ ಭಾಗ್ – ಪಿ. ವಿ.ಎಸ್.ಜಂಕ್ಷನ್ – ನವಭಾರತ ವೃತ್ತ -ಸಿಟಿ ಸೆಂಟರ್ – ಹಂಪನಕಟ್ಟೆ- ಕೆಬಿ ಕಟ್ಟೆ – ಕಾರ್ […]
ನಟಿ ರಚಿತಾರಾಮ್ ಹೆಗಲಿಗೆ ಕೈಹಾಕಿ ಹುಚ್ಚಾಟವಾಡಿದ ಅಭಿಮಾನಿ: ಪೊಲೀಶ್ ವಶಕ್ಕೆ

ತುಮಕೂರು: ತುಮಕೂರು ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರಿಗೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವೇದಿಕೆಗೆ ಬಂದ ವ್ಯಕ್ತಿ, ಅವರ ಹೆಗಲ ಮೇಲೆ ಕೈ ಹಾಕಿ ಎಳೆದಾಡಲು ಯತ್ನಿಸಿದ್ದು, ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ರಾತ್ರಿ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ರಚಿತಾ ರಾಮ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ […]
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಮುಹೂರ್ತ ಫಿಕ್ಸ್, ನ.1ರಂದು ಸಂಚಾರ ಶುರು!

ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಚಾಲನೆ ದೊರೆಯುವ ಸಾಧ್ಯತೆಯಿದೆ. ನವೆಂಬರ್ 2ರಿಂದ ರೈಲಿನ ನಿಯಮಿತ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ರೈಲ್ವೆ ಇಲಾಖೆಯ ಉನ್ನತ ಮೂಲಗಳ ಮಾಹಿತಿ ಪ್ರಕಾರ, ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ವರೆಗೆ ಸಂಚರಿಸಲಿದೆ. ವಾರದಲ್ಲಿ […]