ಕಾರ್ಕಳ: ನಿಟ್ಟೆಯಲ್ಲಿ ಉದ್ಘಾಟನೆಗೊಂಡ ‘ನಿಸ್ತಂತು’ ಉಪಗ್ರಹ ಟ್ರ್ಯಾಕಿಂಗ್ ಕೇಂದ್ರ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿಭಾಗ ಮತ್ತು ಇ & ಸಿ (ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗ ಜಂಟಿಯಾಗಿ ಸ್ಥಾಪಿಸಿದ ಉಪಗ್ರಹ ಟ್ರ್ಯಾಕಿಂಗ್ ಕೇಂದ್ರವಾದ ‘ನಿಟ್ಟೆ ಸ್ಯಾಟಲೈಟ್ ಟ್ರ್ಯಾಕಿಂಗ್ ಮತ್ತು ನ್ಯಾವಿಗೇಷನಲ್ ಟೆಲಿಮೆಟ್ರಿ ಯುನಿಟ್’ – ನಿಸ್ತಂತು ವನ್ನು ಅಕ್ಟೋಬರ್ 9 ರಂದು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು. ಈ ಕೇಂದ್ರವನ್ನು ಉಡುಪಿ ಜಿಲ್ಲಾ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) […]
ಮಂಗಳೂರು: ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಸೈಂಟ್ ಆಗ್ನೆಸ್ ಕಾಲೇಜು: ಪರೀಕ್ಷೆ ಮುಂದೂಡಿಕೆ

ಮಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆಗೆ ಕೊನೆಗೂ ಸ್ಪಂದಿಸಿರುವ ಮಂಗಳೂರಿನ ಬೆಂದೂರ್ವೆಲ್ನ ಸೈಂಟ್ ಆಗ್ನೆಸ್ ಕಾಲೇಜು, ಅಕ್ಟೋಬರ್ 19 ಮತ್ತು 22ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿದೆ. ಕಾಲೇಜಿನಲ್ಲಿ ಅಕ್ಟೋಬರ್ 12ರಿಂದ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು. ಮಂಗಳೂರು ದಸರಾ ಸಂದರ್ಭದಲ್ಲಿ ರಜೆ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಕಾಲೇಜಿನ ಗೇಟ್ ಎದುರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ […]
ಉಡುಪಿಗೆ ಸಿಕ್ಕಿತು ಕರ್ನಾಟಕದ ಮೊದಲ ಸಂಪೂರ್ಣ ಸಾಕ್ಷರತಾ ಜಿಲ್ಲೆ ಎನ್ನುವ ಹೆಗ್ಗಳಿಕೆ: ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ!

ಬೆಂಗಳೂರು: ಶಿಕ್ಷಣ ಮತ್ತು ಸಾಕ್ಷರತೆಯಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಗೆ ಮತ್ತೊಂದು ಐತಿಹಾಸಿಕ ಹೆಗ್ಗಳಿಕೆ ದೊರೆತಿದೆ. ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯನ್ನು ‘ಸಂಪೂರ್ಣ ಸಾಕ್ಷರತಾ ಜಿಲ್ಲೆ’ ಎಂದು ಅಧಿಕೃತವಾಗಿ ಘೋಷಿಸಲು ರಾಜ್ಯ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಕೃತ ಆದೇಶ ಹೊರಡಿಸಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ (ಸಿಇಒ) ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯೆಂದು ಘೋಷಿಸಲು ಅಧಿಕಾರ ನೀಡಿದ್ದಾರೆ. ಭಾರತ […]
ಮಣಿಪಾಲ: ರೂಮ್ ಬಾಯ್ಸ್ ಬೇಕಾಗಿದ್ದಾರೆ

ಉಡುಪಿ: ಮಣಿಪಾಲದ ಪ್ರತಿಷ್ಠಿತ ಹೋಟೆಲ್ ನಲ್ಲಿ ರಾತ್ರಿ ಕೆಲಸ ಮಾಡಲು ರೂಮ್ ಬಾಯ್ಸ್ ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸಿ: 7022084165
ವಾಟ್ಸಾಪ್ನಲ್ಲಿ ಬರಲಿದೆ ಮೆಸೇಜ್ ಶೆಡ್ಯೂಲ್ ಫೀಚರ್: ಆಫ್ಲೈನ್ನಲ್ಲಿದ್ದರೂ ನಿಗದಿತ ಸಮಯಕ್ಕೆ ಕಳಿಸುತ್ತೆ ಸಂದೇಶ!

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಮೆಸೇಜ್ಗಳನ್ನು ಮುಂಚಿತವಾಗಿಯೇ ನಿಗದಿತ ದಿನ ಮತ್ತು ಸಮಯಕ್ಕೆ ಕಳುಹಿಸುವ ‘ಮೆಸೇಜ್ ಶೆಡ್ಯೂಲಿಂಗ್’ ಫೀಚರ್ ಅನ್ನು ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು WABetaInfo ವರದಿ ತಿಳಿಸಿದೆ. ಈ ಸೌಲಭ್ಯ ವೈಯಕ್ತಿಕ ಚಾಟ್ಗಳು ಮತ್ತು ಗ್ರೂಪ್ ಚಾಟ್ಗಳೆರಡರಲ್ಲೂ ಲಭ್ಯವಾಗಲಿದೆ. ಟೆಕ್ಸ್ಟ್ ಮೆಸೇಜ್ಗಳ ಜೊತೆಗೆ ಫೋಟೋ, ವಿಡಿಯೋ ಹಾಗೂ ಲಿಂಕ್ಗಳನ್ನು ಕೂಡ ನಿಗದಿತ ಸಮಯಕ್ಕೆ ಕಳುಹಿಸಲು ಸಾಧ್ಯವಾಗಲಿದೆ. ವಾಟ್ಸಾಪ್ನ 2.26.40.7 ಬೀಟಾ ಆವೃತ್ತಿಯ […]