ಪೊಲೀಸರಿಗೂ ಕರ್ತವ್ಯ ಆ್ಯಪ್ ಕಡ್ಡಾಯ; ಹೊಸ ಹಾಜರಾತಿ ನಿಯಮಕ್ಕೆ ಸಿಬ್ಬಂದಿಗಳ ಅಸಮಾಧಾನ!

ಬೆಂಗಳೂರು: ಆಡಳಿತದಲ್ಲಿ ದಕ್ಷತೆ, ನೌಕರರ ಹಾಜರಾತಿಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ತವ್ಯ ಆ್ಯಪ್ ಅನ್ನು ಪೊಲೀಸ್ ಇಲಾಖೆಯಲ್ಲೂ ಕಡ್ಡಾಯಗೊಳಿಸಿರುವುದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯದ ಎಲ್ಲ ಪೊಲೀಸರು ಕರ್ತವ್ಯ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೆ, ಪ್ರತಿದಿನ ಲಾಗಿನ್ ಮತ್ತು ಲಾಗ್ಔಟ್ ಮಾಡುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಡಿಐಜಿಪಿ ಅ. 5ರಂದು […]
ಗೃಹಲಕ್ಷ್ಮಿ ಹಣದಿಂದ ಸಾಲದ ಕಂತು ಕಡಿತಕ್ಕೆ ಸರ್ಕಾರದ ಬ್ರೇಕ್; ಒಪ್ಪಿಗೆಯಿಲ್ಲದೆ ಕಡಿತಗೊಳಿಸಿದ ಹಣ ಮರುಪಾವತಿಗೆ ಸೂಚನೆ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ₹2,000 ಸಹಾಯಧನವನ್ನು ಸಾಲದ ಕಂತು, ಬಡ್ಡಿ ಅಥವಾ ಇತರ ಬಾಕಿ ಮೊತ್ತಗಳಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಕರ್ನಾಟಕ ಸರ್ಕಾರ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಫಲಾನುಭವಿಗಳ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಈಗಾಗಲೇ ಕಡಿತಗೊಳಿಸಿರುವ ಹಣವನ್ನು ತಕ್ಷಣವೇ ಮರುಪಾವತಿಸುವಂತೆಯೂ ಸೂಚಿಸಿದೆ. ಎಲ್ಲ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಈ ನಿರ್ದೇಶನಗಳನ್ನು ಪಾಲಿಸುವಂತೆ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್ಎಲ್ಬಿಸಿ) ಸಂಚಾಲಕರಿಗೆ ಹೆಚ್ಚುವರಿ […]
ನ.6ರಂದು ಡಾ.ಜಿ ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿವರ್ಷ ನಡೆಸಲ್ಪಡುವ ಕನ್ನಡ ರಾಜ್ಯೋತ್ಸವ ಸದ್ಭಾವನಾ 2026ರ ನಾಡುನುಡಿಗೆ ಭಾವ ನಮನ ಕಾರ್ಯಕ್ರಮ ನ.6ರಂದು ಸಂಜೆ ಕೋಟದ ಮಾಂಗಲ್ಯ ಮಂದಿರದ ಎದುರಿನ ಮೈದಾನದಲ್ಲಿ ಜರಗಲಿದೆ. ಈ ಪ್ರಯುಕ್ತ ರಾಜ್ಯದ ಪ್ರಸಿದ್ಧ ಸಾಧಕರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನ ಕಾರ್ಯಕ್ರಮ ಜರಗಲಿದ್ದು ಸಮಾಜ ಸೇವಕ ಡಾ.ಜಿ ಶಂಕರ್ ಫ್ಯಾುಲಿ ಟ್ರಸ್ಟ್ ಪ್ರವರ್ತಕ ಜಿ ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಗಣ್ಯರ ಸಮ್ಮುಖದಲ್ಲಿ […]
ನವೆಂಬರ್ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ! ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸುನಿಲ್ ಕುಮಾರ್ ಹೆಸರು ಚರ್ಚೆಯಲ್ಲಿ.!

ಬೆಂಗಳೂರು: ನವೆಂಬರ್ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಬಳಿಕ ರಾಜ್ಯ ಬಿಜೆಪಿಯ ಸಾಂಸ್ಥಿಕ ರಚನೆ ಹಾಗೂ ವಿಧಾನಸಭೆಯಲ್ಲಿನ ಪ್ರಮುಖ ಹುದ್ದೆಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಮೂರು ವರ್ಷಗಳ ಅವಧಿ ನವೆಂಬರ್ನಲ್ಲಿ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಹೊಸ ನಾಯಕತ್ವದ ಆಯ್ಕೆ ಕುರಿತು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಬದಲಿಗೆ ಹರೀಶ್ ದ್ವಿವೇದಿ ಅವರನ್ನು […]