ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ.5ರಂದು ಮಂಗಳೂರಿನ ಹಲವೆಡೆ ವಾಹನ ಸಂಚಾರ ಬದಲಾವಣೆ; ಪರ್ಯಾಯ ಮಾರ್ಗ ಬಳಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಸೂಚನೆ.!

ಮಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ.5ರಂದು ಮಂಗಳೂರು ನಗರದ ವಿವಿಧೆಡೆ ಮೊಸರುಕುಡಿಕೆ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ವಾಹನ ಸಂಚಾರ ದಟ್ಟಣೆಯಾಗುವ ಸ್ಥಳಗಳು ಹಾಗೂ ಪರ್ಯಾಯ ಮಾರ್ಗಗಳ ವಿವರ: 1. ತೊಕ್ಕೊಟ್ಟು ಒಳಪೇಟೆ ಮೊಸರುಕುಡಿಕೆ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ತೊಕ್ಕೊಟ್ಟು ಜಂಕ್ಷನ್ ನಿಂದ ಕೊಲ್ಯ ಜಂಕ್ಷನ್ ವರೆಗೆ ಹಾಗೂ […]
ಉಡುಪಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 16 ಶಿಕ್ಷಕರ ಆಯ್ಕೆ

ಉಡುಪಿ: ಶಾಲಾ ಶಿಕ್ಷಣ ಇಲಾಖೆಯಿಂದ ನೀಡಲಾಗುವ 2026ನೇ ಸಾಲಿನ ಉಡುಪಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ವಿವಿಧ ತಾಲೂಕುಗಳ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 16ಶಿಕ್ಷಕರು ಆಯ್ಕೆಯಾಗಿದ್ದಾರೆ.ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೈಂದೂರು ತಾಲೂಕಿನ ಸಾಲಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಗಣೇಶ್, ಬ್ರಹ್ಮಾವರ ತಾಲೂಕಿನ ಆಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರವಿ, ಕುಂದಾಪುರ ತಾಲೂಕಿನ ಅಲ್ಪಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಷಾಕುಮಾರಿ, ಉಡುಪಿ ತಾಲೂಕಿನ ವಳಕಾಡು ಸರ್ಕಾರಿ […]
ಹೆಬ್ರಿ: ನಿವೃತ್ತ ಪೋಸ್ಟ್ ಮಾಸ್ಟರ್ ನಾಪತ್ತೆ

ಉಡುಪಿ ಸೆಪ್ಟಂಬರ್ 04: ಹೆಬ್ರಿ ತಾಲೂಕು ಶೇಡಿಮನೆ ಗ್ರಾಮ ಅಗಳಿಬೈಲು ನಿವಾಸಿ ಸುರತ್ ಕುಮಾರ್ ಶೆಟ್ಟಿ (64) ಎಂಬ ವ್ಯಕ್ತಿಯು ನಿವೃತ್ತ ಪೋಸ್ಟ್ ಮಾಸ್ಟರ್ ಆಗಿದ್ದು, ಎಂದಿನAತೆ ಆಗಸ್ಟ್ 29 ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ವಾಕಿಂಗ್‌ಗೆ ಹೋದವರು ಈವರೆಗೂ ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.5 ಅಡಿ 4 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಗೋಧಿ ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಅಮಾಸೆಬೈಲು […]
ಕಾರ್ಕಳ: ಅಪಘಾತದಲ್ಲಿ ಗಂಭೀರ ಗಾಯ; 10 ತಿಂಗಳ ಬಳಿಕ ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಉಡುಪಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸುಮಾರು 10 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.ಅತ್ತೂರು ಪದವು ಗ್ರಾಮದ ಐಶ್ವರ್ಯ ಆಚಾರ್ಯ (28) ಮೃತಪಟ್ಟವರು.2025ರ ನವೆಂಬರ್ 13ರಂದು ಜಗದೀಶ್ ಆಚಾರ್ಯ (40) ಅವರು ಪತ್ನಿ ಐಶ್ವರ್ಯ ಅವರನ್ನು ಸ್ಕೂಟರ್‌ನಲ್ಲಿ ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ನಿಟ್ಟೆಯಿಂದ ಬೆಳ್ಮಣ್ –ಮುಂಡ್ಕೂರು ಮಾರ್ಗವಾಗಿ ಕಿನ್ನಿಗೋಳಿ ಕಡೆಗೆ ತೆರಳುತ್ತಿದ್ದರು. ಬೆಳ್ಮಣ್ ಗ್ರಾಮದ ಇಂದಾರು ಎಂಬಲ್ಲಿ ಬೆಳಿಗ್ಗೆ ಸುಮಾರು 7.20ಕ್ಕೆ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಿದ್ದ […]
ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್: ಅಷ್ಟಮಿಯ ವ್ರತ, ಪೂಜೆಯ ವಿಶೇಷತೆ ಏನು?ಇದು ಕೇವಲ ಆಚರಣೆಯಲ್ಲ!

ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ ಪವಿತ್ರ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 4ರಂದು ಆಚರಿಸಲಾಗುತ್ತಿದೆ. ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರದ ಸಂಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಸಂಪ್ರದಾಯವಾಗಿದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 4ರಂದು ರಾತ್ರಿ 11.16ರವರೆಗೆ ಅಷ್ಟಮಿ ತಿಥಿ ಇರಲಿದೆ. ರೋಹಿಣಿ ನಕ್ಷತ್ರವು ರಾತ್ರಿ 11.14ರವರೆಗೆ ಇರಲಿದೆ. ಹೀಗಾಗಿ ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಇರುವ ಅವಧಿಯಲ್ಲಿ ಕೃಷ್ಣನ ಪೂಜೆ ಹಾಗೂ ವ್ರತದ ಪ್ರಮುಖ ಆಚರಣೆಗಳನ್ನು ನೆರವೇರಿಸುವುದು ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಮಧ್ಯರಾತ್ರಿಯಲ್ಲೇ ಕೃಷ್ಣನ ಪೂಜೆ […]