ಮಾಹೆಯಲ್ಲಿ ತುಳು ಭಾಷಾ ಕಲಿಕೆಯ ತರಗತಿ

ಮಣಿಪಾಲ, ಆಗಸ್ಟ್‌ 31, 2026 : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಇದರಘಟಕವಾಗಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸಾಯನ್ಸಸ್‌, ಹ್ಯುಮಾನಿಟೀಸ್‌ ಆ್ಯಂಡ್‌ಆರ್ಟ್ಸ್‌ [ಮಿಶ] ವಿಭಾಗದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಕೇಂದ್ರ[ಸಿಕೆಆರ್‌ಎಲ್‌] ವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇದರಸಹಭಾಗಿತ್ವದಲ್ಲಿ ‘ತುಳು ಸಂಭಾಷಣ ಕಲಿಕೆ’ ಶೈಕ್ಷಣಿಕ ಕಾರ್ಯಕ್ರಮನ್ನು ಆಯೋಜಿಸುತ್ತಿದ್ದು ಇದರ ಉದ್ಘಾಟನೆಸೆಪ್ಟೆಂಬರ್‌ 1, 2025ರಂದು ಸಂಜೆ 5. 30 ಗಂಟೆಗೆ ನಡೆಯಲಿದೆ. […]

ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ನಿಟ್ಟೆ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು

ಕಾರ್ಕಳ: ಆಗಸ್ಟ್ 26 ರಿಂದ 29 ರವರೆಗೆ ರಾಯಚೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಕ್ಲಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿಟ್ಟೆಯ ಡಾ. ಎನ್‌ಎಸ್‌ಎಎಂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ನಾಲ್ಕು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.ವರ್ಷಿತ್ ಗೌಡ ಮತ್ತು ಕುಶಿ ಜೆ. ಶೆಟ್ಟಿ ತಮ್ಮ ತಮ್ಮ ವಿಭಾಗಗಳಲ್ಲಿ 1,500 ಮೀ ಮತ್ತು 3,000 ಮೀ ಓಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದರು.ಅವರ ಅದ್ಭುತ ಪ್ರದರ್ಶನದ ಆಧಾರದ ಮೇಲೆ, ಇಬ್ಬರೂ ಕ್ರೀಡಾಪಟುಗಳನ್ನು ಅಕ್ಟೋಬರ್ 15 ರಿಂದ […]

ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ ಕಾಂಗ್ರೆಸ್ ಸರ್ಕಾರವೇ ಭಸ್ಮವಾಗಲಿದೆ- ಸುನಿಲ್ ಕುಮಾರ್

ಉಡುಪಿ: ‘ಇಸ್ಲಾಂ ಧರ್ಮ ಶ್ರೇಷ್ಠ’ ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆಯನ್ನು ತೋರಿಸುತ್ತದೆ. ಮುಸ್ಲಿಂ ಓಲೈಕೆಗಾಗಿ ಹಿಂದೂ ಧರ್ಮ, ಹಿಂದುತ್ವ ಹಾಗೂ ಹಿಂದೂಗಳ ಧಾರ್ಮಿಕ ಚಟುವಟಿಕೆಗಳನ್ನು ಅವಹೇಳನ ಮಾಡುವುದನ್ನು ಸಮಾಜ ಸಹಿಸುವುದಿಲ್ಲ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಎಚ್ಚರಿಸಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮಕ್ಕೆ ಅಪಮಾನ ಮಾಡುವ ಯಾವುದೇ ಹೇಳಿಕೆ ಅಥವಾ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಮುಸ್ಲಿಂ ಓಲೈಕೆ ನೆಪದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ […]

ಚೆಕ್‌ನ ಹಿಂಭಾಗ ಸಹಿ ಹಾಕುವುದರ ಹಿಂದಿದೆ ಈ ಕಾರಣ! ತಿಳಿಯದೇ ಎಂದಿಗೂ ಸಹಿ ಹಾಕಬೇಡಿ

ಬ್ಯಾಂಕ್‌ ವ್ಯವಹಾರಗಳಲ್ಲಿ ಚೆಕ್‌ ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಚೆಕ್‌ ಬರೆಯುವಾಗ ಮುಂಭಾಗದಲ್ಲಿ ಸಹಿ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವೊಮ್ಮೆ ಚೆಕ್‌ನ ಹಿಂಭಾಗದಲ್ಲೂ ಸಹಿ ಮಾಡಬೇಕಾಗುತ್ತದೆ. ಅಷ್ಟಕ್ಕೂ ಚೆಕ್‌ನ ಹಿಂಭಾಗದಲ್ಲಿ ಸಹಿ ಯಾಕೆ ಮಾಡಬೇಕು? ಅದರ ಉದ್ದೇಶ ಏನು? ಎಲ್ಲ ಚೆಕ್‌ಗಳಿಗೂ ಹಿಂಭಾಗದಲ್ಲಿ ಸಹಿ ಮಾಡಬೇಕೇ? ಎಂಬ ಪ್ರಶ್ನೆ ಹಲವರಲ್ಲಿದೆ. ಚೆಕ್‌ನ ಹಿಂಭಾಗದ ಸಹಿ ಎಂದರೇನು? ಚೆಕ್‌ನ ಹಿಂಭಾಗದಲ್ಲಿ ಮಾಡುವ ಸಹಿಯನ್ನು ಸಾಮಾನ್ಯವಾಗಿ ಎಂಡೋರ್ಸ್‌ಮೆಂಟ್‌ (Endorsement) ಎಂದು ಕರೆಯಲಾಗುತ್ತದೆ. ಚೆಕ್‌ ಅನ್ನು ಒಬ್ಬರಿಂದ […]

ಕರಾವಳಿಗರಿಗೆ ಗುಡ್‌ ನ್ಯೂಸ್: ಮಂಗಳೂರಿನಲ್ಲಿ ಸೆ.18ಕ್ಕೆ ಸಚಿವ ಸಂಪುಟ ಸಭೆ; ತುಳು ಭಾಷೆಗೆ ಸಿಗುತ್ತಾ ಮಾನ್ಯತೆ?

ಮಂಗಳೂರು: ಕರಾವಳಿ ಭಾಗದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದ್ದು, ಕರಾವಳಿ ಭಾಗದ ಜನರ ಹಲವು ಪ್ರಮುಖ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚನೆ […]