ರೋಟರಿ ಕ್ಲಬ್ ಮಣಿಪಾಲ ಟೌನ್’ಗೆ ಪ್ರತಿಷ್ಠಿತ ಜಿಲ್ಲಾ ಮಟ್ಟದ ಪ್ರಶಸ್ತಿಗಳ ಗರಿ: ಸಣ್ಣ ಕ್ಲಬ್ಗಳ ವಿಭಾಗದಲ್ಲಿ ಪ್ರಥಮ ಸ್ಥಾನ; ‘ಕ್ಲಬ್ ಎಕ್ಸಲೆನ್ಸ್ ಅವಾರ್ಡ್’ ಗೌರವ

ಮಣಿಪಾಲ: ಸೇವಾ ಚಟುವಟಿಕೆಗಳು, ಸಮಾಜಮುಖಿ ಯೋಜನೆಗಳು ಹಾಗೂ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಗಮನ ಸೆಳೆದಿರುವ ರೋಟರಿ ಕ್ಲಬ್ ಮಣಿಪಾಲ ಟೌನ್, 2025-26ನೇ ಸಾಲಿನಲ್ಲಿ ಎರಡು ಪ್ರತಿಷ್ಠಿತ ಗೌರವಗಳೊಂದಿಗೆ ಒಟ್ಟು 26 ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182ರ ಡಿಸ್ಟ್ರಿಕ್ಟ್ ಅವಾರ್ಡ್ಸ್ 2025-26ರಲ್ಲಿ, ಮಣಿಪಾಲ ಟೌನ್ ಕ್ಲಬ್ ಸಣ್ಣ ಕ್ಲಬ್ಗಳ (40 ಸದಸ್ಯರು ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಸಾಧನೆಗಾಗಿ ಕ್ಲಬ್ಗೆ ವಿಶೇಷ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.ಇದರೊಂದಿಗೆ, ರೋಟರಿ ಇಂಟರ್ನ್ಯಾಷನಲ್ ವತಿಯಿಂದ ನೀಡಲಾಗುವ […]
‘ಭಾರತ್ ಜೋಡಣೆ’ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶ ಇರಬಾರದು: ಕೋಟ

ಉಡುಪಿ: ‘ಭಾರತ್ ಜೋಡಣೆ’ ಹೆಸರಿನಲ್ಲಿ ಯುವಕರನ್ನು ಸಂಘಟಿಸಿ ಅವರಲ್ಲಿ ರಾಷ್ಟ್ರಭಕ್ತಿ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವ ಉದ್ದೇಶಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಸರ್ಕಾರಿ ಹಣ ಮತ್ತು ವ್ಯವಸ್ಥೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಬಾರದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತ್ ಜೋಡಣೆ’ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಅನುಮಾನ ಮೂಡಿದರೆ ಪ್ರತಿಪಕ್ಷವಾಗಿ ಪ್ರಶ್ನಿಸುವುದು ನಮ್ಮ ಕರ್ತವ್ಯ. ಸರ್ಕಾರದ ಕ್ರಮಗಳನ್ನು ಎಚ್ಚರಿಕೆಯಿಂದ ಗಮನಿಸುತ್ತೇವೆ ಎಂದರು. ಧಾರ್ಮಿಕ ಆಚರಣೆಗಳಿಗೆ ಅತಿಯಾದ ನಿರ್ಬಂಧ […]
ಉಡುಪಿ: ಕಿಚನ್ ಹೆಲ್ಪರ್, ಸ್ವೀಟ್ಸ್ ಮೇಕರ್ಸ್ & ಲೈನ್ ಸೇಲ್ಸ್ ಗೆ ಹುಡುಗರು ಬೇಕಾಗಿದ್ದಾರೆ

ಉಡುಪಿ: ಪೆರ್ಡೂರಿನಲ್ಲಿರುವ ಪ್ರತಿಷ್ಠಿತ ತಿಂಡಿ ಫ್ಯಾಕ್ಟರಿಗೆ ಕಿಚನ್ ಹೆಲ್ಪರ್, ಸ್ವೀಟ್ಸ್ ಮೇಕರ್ಸ್ ಹಾಗೂ ಲೈನ್ ಸೇಲ್ಸ್ ಗೆ ಹುಡುಗರು ಬೇಕಾಗಿದ್ದಾರೆಉಚಿತ ಊಟ ವಸತಿ. ಉತ್ತಮ ವೇತನ ನೀಡಲಾಗುವುದು.ಇಎಸ್ಐ ವ್ಯವಸ್ಥೆ ಕೊಡಲಾಗುವುದು.ಆಸಕ್ತರು ಸಂಪರ್ಕಿಸಿ. ಪೆರ್ಡೂರು ಉಡುಪಿ ಮೊ: 9606169903
ದಕ್ಷಿಣ ಕನ್ನಡ: ಆಟೋ ದರ ಪರಿಷ್ಕರಣೆ: ಮೊದಲ 1.5 ಕಿ.ಮೀಗೆ ₹40 :ರಾತ್ರಿ ದರ ಎಷ್ಟು? ಲಗೇಜ್ ಗೆ ಹೆಚ್ಚುವರಿ ಹಣ?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಮೊದಲ 1.5 ಕಿ.ಮೀ.ಗೆ ಕನಿಷ್ಠ ₹40 ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ಗರಿಷ್ಠ ಮೂವರು ಪ್ರಯಾಣಿಕರು ಸಂಚರಿಸಲು ಅವಕಾಶವಿದೆ. ಪರಿಷ್ಕೃತ ದರದಂತೆ, ಮೊದಲ 1.5 ಕಿ.ಮೀ. ಬಳಿಕ ಪ್ರತಿ ಕಿ.ಮೀ.ಗೆ ₹20 ಪಾವತಿಸಬೇಕು. ಈ ದರವೂ ಗರಿಷ್ಠ ಮೂವರು ಪ್ರಯಾಣಿಕರಿಗೆ ಅನ್ವಯವಾಗಲಿದೆ. ಆಟೋ ಕಾಯುವಿಕೆಗೆ ಮೊದಲ 10 ನಿಮಿಷ ಉಚಿತವಾಗಿದ್ದು, ಬಳಿಕ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ ₹5 ಶುಲ್ಕ ವಿಧಿಸಬಹುದಾಗಿದೆ. […]
ನಿಟ್ಟೆ ತಾಂತ್ರಿಕ ಕಾಲೇಜಿನ ಎನ್ಎಸ್ಎಸ್ ಘಟಕ ಉದ್ಘಾಟನೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2026-27ನೇ ಶೈಕ್ಷಣಿಕ ಸಾಲಿನ ಎನ್ಎಸ್ಎಸ್ ಘಟಕದ ಚಟುವಟಿಕೆಗಳನ್ನು ಆಗಸ್ಟ್ ೨೯ ರಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗದ ನಿರ್ದೇಶಕ ಪ್ರೊ. ಹರಿಕೃಷ್ಣ ಭಟ್ ಅವರು ಆಹ್ವಾನಿತ ಗಣ್ಯರು ಹಾಗೂ ಸುಮಾರು 250 ಎನ್ಎಸ್ಎಸ್ ಸ್ವಯಂಸೇವಕರ ಸಮ್ಮುಖದಲ್ಲಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ವಹಿಸಿದ್ದರು.ದೀಪ ಬೆಳಗಿಸುವ ಮೂಲಕ ಘಟಕವನ್ನು ಔಪಚಾರಿಕವಾಗಿ ಉದ್ಘಾಟಿಸಲಾಯಿತು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರೊ. ಹರಿಕೃಷ್ಣ […]